ನೋಟ್ ನಿಷೇಧದ ನಂತರ ದೊಡ್ಡ ಮೊತ್ತದ ಹಣ ಜಮೆ ಮಾಡಿದ 5.56 ಲಕ್ಷ ಮಂದಿ ವಿರುದ್ಧ ತನಿಖೆ

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ಜಮೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ಜಮೆ ಮಾಡಿದ 5.56 ಲಕ್ಷ ಮಂದಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ.
ಇನ್ನು ಆಪರೇಷನ್ ಕ್ಲೀನ್ ಮನಿ(ಒಸಿಎಂ) ಮೊದಲ ಹಂತದಲ್ಲಿ ತಮ್ಮ ಎಲ್ಲಾ ಬ್ಯಾಂಕ್ ಗಳ ಖಾತೆಯ ವಿವರ ನೀಡದ 1.04 ಲಕ್ಷ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಈ ಎಲ್ಲರ ವಿರುದ್ಧವೂ ಆದಾಯ ತೆರಿಗೆ ಇಲಾಖೆ ಈಗ ತನಿಖೆಗೆ ಮುಂದಾಗಿದೆ.
ಮೊದಲ ಹಂತದಲ್ಲಿ ದೊಡ್ಡ ಮೊತ್ತದ ನಗದು ಜಮೆ ಮಾಡಿದ್ದ 17.92 ಲಕ್ಷ ವ್ಯಕ್ತಿಗಳನ್ನು ಗುರುತಿಸಲಾಗಿತ್ತು. ಈ ಪೈಕ 9.72 ಮಂದಿ ಆನ್ ಲೈನ್ ಮೂಲಕ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದು, ಈಗ ಎರಡನೇ ಹಂತದಲ್ಲಿ ದೊಡ್ಡ ಮೊತ್ತದ ಹಣ ಜಮೆ ಮಾಡಿದ 5.56 ಲಕ್ಷ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ನಗದು ಜಮೆ ಮಾಡಿದವರು ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡದೆ ನೇರವಾಗಿ ಆನ್ ಲೈನ್ ಮೂಲಕ ಫೈಲ್ ಮಾಡಲು ಅವಕಾಶ ನೀಡಲಾಗಿದೆ. ಈಗ ಗುರುತಿಸಲಾಗಿರುವ ವ್ಯಕ್ತಿಗಳಿಗೆ ಇ-ಮೇಲ್ ಹಾಗೂ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com