• Tag results for probe

ಪ್ರಧಾನಿ ಮೋದಿ ಭದ್ರತಾಲೋಪ ವಿಚಾರಣೆ ನಿಲ್ಲಿಸುವಂತೆ ಬೆದರಿಕೆ: ಸುಪ್ರೀಂ ಕೋರ್ಟ್ ವಕೀಲರು

ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಪ್ರಕರಣದ ವಿಚಾರಣೆಯಿಂದ ದೂರವಿರುವಂತೆ  ಬೆದರಿಕೆ ಬರುತ್ತಿದೆ ಎಂದು ಸುಪ್ರೀಂಕೋರ್ಟ್ ವಕೀಲರು ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದಾರೆ.

published on : 10th January 2022

ಪ್ರಧಾನಿ ಮೋದಿಗೆ ಭದ್ರತಾ ಲೋಪ: ನಿವೃತ್ತ ನ್ಯಾಯಾಧೀಶ ನೇತೃತ್ವದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ!

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಸಂಭವಿಸಿದ ಭದ್ರತಾ ಲೋಪಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಂಜಾಬ್ ಸರ್ಕಾರ ನಡೆಸುತ್ತಿರುವ ಎರಡು ಪ್ರತ್ಯೇಕ ಸಮಿತಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲು ಒಪ್ಪಿಗೆ ನೀಡಿದೆ.

published on : 10th January 2022

ಸೇನಾ ಹೆಲಿಕಾಪ್ಟರ್ ದುರಂತ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ತನಿಖಾ ತಂಡದಿಂದ ವಿಸ್ತೃತ ವರದಿ ಸಲ್ಲಿಕೆ

ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆಯ ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಇಂದು ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.

published on : 5th January 2022

ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆ

 ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಎಂಐ-17 ವಿ5 ಅಪಘಾತಕ್ಕೆ ಸಂಬಂಧಿಸಿದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ವಾರ ವಾಯುಪಡೆ ಕೇಂದ್ರ ಕಚೇರಿಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. 

published on : 2nd January 2022

ಹರಿದ್ವಾರ ಧರ್ಮ ಸಂಸದ್ ನಲ್ಲಿ ದ್ವೇಷಪೂರಿತ ಭಾಷಣ ಪ್ರಕರಣ: 5 ಮಂದಿ ಸದಸ್ಯರ ವಿಶೇಷ ತನಿಖಾ ತಂಡದಿಂದ ವಿಚಾರಣೆ

ಇದೇ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ವಿರುದ್ಧ ಭಾಷಣ ಮಾಡಿದ ಆರೋಪದ ಮೇಲೆ ಸಾಧು ಕಾಳಿಚರಣ್ ಮಹಾರಾಜ್ ರನ್ನು ಪೊಲೀಸರು ಬಂಧಿಸಿದ್ದರು.

published on : 2nd January 2022

ಉಡುಪಿ: ಕೊರಗರ ಮೇಲೆ ದೌರ್ಜನ್ಯ ಪ್ರಕರಣ ಸಿಒಡಿ ತನಿಖೆಗೆ ವರ್ಗಾವಣೆ, ಗಾಯಗೊಂಡವರಿಗೆ ತಲಾ 2 ಲಕ್ಷ ರು. ಪರಿಹಾರ

ಬ್ರಹ್ಮಾವರ ತಾಲೂಕಿನ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಘಟನೆಯನ್ನು ಸಿಒಡಿ ತನಿಖೆಗೆ ಆದೇಶ ನೀಡಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

published on : 1st January 2022

ಸಿಸಿಐ ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ಕೋರಿದ ಗೂಗಲ್: ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ

ಗೂಗಲ್ ಪ್ಲೇ ಸ್ಟೋರಿನಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆಗೆ ವಿರುದ್ಧವಾದ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಗೂಗಲ್ ವಿರುದ್ಧ ಕೇಳಿಬಂದಿತ್ತು.

published on : 28th December 2021

ಅಯೋಧ್ಯೆಯಲ್ಲಿ ಬಿಜೆಪಿ ನಾಯಕರ ಸಂಬಂಧಿಕರಿಂದಲೇ ಭೂಕಬಳಿಕೆ: ಯೋಗಿ ಸರ್ಕಾರ ತನಿಖೆಗೆ ಆದೇಶ

ರಾಮ ಮಂದಿರದ ಬಳಿ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಸಂಬಂಧಿಕರು ಭೂಮಿಯನ್ನು ಕಬಳಿಸಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.

published on : 23rd December 2021

ಕ್ರೈಸ್ತರ ಧಾರ್ಮಿಕ ಗ್ರಂಥಗಳನ್ನು ಸುಟ್ಟ ಪ್ರಕರಣ: ತನಿಖೆಗೆ ಕೋಲಾರ ಎಸ್ ಪಿ ಆದೇಶ

ಕೋಲಾರದ ಶ್ರೀನಿವಾಸಪುರದಲ್ಲಿ ಕ್ರೈಸ್ತರ ಧಾರ್ಮಿಕ ಗ್ರಂಥಗಳನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಕಿಶೋರ್ ಬಾಬು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.

published on : 14th December 2021

ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸಾವಿನ ತನಿಖೆಯಾಗಬೇಕು: ಸದನದಲ್ಲಿ ಸಚಿವರ ಒತ್ತಾಯ

ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ಆಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.

published on : 14th December 2021

ಧಾರ್ಮಿಕ ಗ್ರಂಥಗಳ ದಹನ: ತನಿಖೆಗೆ ಆದೇಶಿಸಿದ ಕೋಲಾರ ಪೊಲೀಸ್

ಕೋಲಾರ ಜಿಲ್ಲೆಯ ಹನುಮನಪಾಳ್ಯದಲ್ಲಿ ಧಾರ್ಮಿಕ ಗ್ರಂಥಗಳನ್ನು ಸುಟ್ಟುಹಾಕಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ. 

published on : 13th December 2021

ಆದಿವಾಸಿಗೆ ಗುಂಡೇಟು: ಸೂಕ್ತ ತನಿಖೆಗೆ ನಟ ಚೇತನ್ ಆಗ್ರಹ

ಆದಿವಾಸಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಅರಣ್ಯ ಸಿಬ್ಬಂದಿ ಬಂದೂಕಿನಿಂದ ಗುಂಡಿಕ್ಕಿ ಗಾಯಗೊಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯಲ್ಲಿ ನಡೆದಿರುವುದು ವರದಿಯಾಗಿದೆ. 

published on : 3rd December 2021

ಸುಲಿಗೆ ಪ್ರಕರಣ: ಥಾಣೆ ಪೊಲೀಸರ ಮುಂದೆ ಪರಮ್ ಬಿರ್ ಸಿಂಗ್ ಹಾಜರು; ಸೋಮವಾರ ತನಿಖಾ ಆಯೋಗದಿಂದ ವಿಚಾರಣೆ

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ಧ ಭ್ರಷ್ಟಾಚಾರದ ಮಾಡಿದ್ದ ಹಿರಿಯ ಪೊಲಿಸ್ ಅಧಿಕಾರಿ ಪರಮ್ ಬಿರ್ ಸಿಂಗ್ ತನ್ನೆದುರು ಹಾಜರಾಗಬೇಕೆಂದು ಆಯೋಗ ಸೂಚನೆ ನೀಡಿದೆ.

published on : 26th November 2021

ಜಾರಕಿಹೊಳಿ ಸಿಡಿ ಪ್ರಕರಣ: ಮೂವರು ಅಧಿಕಾರಿಗಳ ವಿರುದ್ಧ ತನಿಖಾ ಆದೇಶಕ್ಕೆ ಹೈಕೋರ್ಟ್ ತಡೆ

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದ ನಗರದ 8ನೆ ಎಸಿಎಂಎಂ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.

published on : 26th November 2021

ಕೋರ್ಟ್ ಆದೇಶದಂತೆ ತನಿಖೆಗೆ ಸಹಕರಿಸುತ್ತೇನೆ: ಮುಂಬೈನಲ್ಲಿ ಪರಮ್‌ ಬೀರ್ ಸಿಂಗ್‌ ಹೇಳಿಕೆ

ಮುಂಬೈ ಕೋರ್ಟ್‌ನಿಂದ ಘೋಷಿತ ಅಪರಾಧಿ ಎಂದು ಕರೆಸಿಕೊಂಡಿರುವ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ನ್ಯಾಯಾಲಯದ ನಿರ್ದೇಶನದಂತೆ ತನಿಖೆಗೆ ಸಹಕಾರ ನೀಡಲು ಗುರುವಾರ ಮುಂಬೈಗೆ ಆಗಮಿಸಿದ್ದಾರೆ.

published on : 25th November 2021
1 2 3 4 5 6 > 

ರಾಶಿ ಭವಿಷ್ಯ