ಡಿ.ಕೆ. ಶಿವಕುಮಾರ್
ರಾಜ್ಯ
ಉದ್ಯಮಿ ರಾಯ್ ಆತ್ಮಹತ್ಯೆ: ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುವುದು ನಮ್ಮ ಸರ್ಕಾರದ ಕೆಲಸ- ಡಿ.ಕೆ ಶಿವಕುಮಾರ್; Video
ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳ ಖಂಡಿಸುತ್ತೇನೆ, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕನಕಪುರ: ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ಕನಕೋತ್ಸವದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಅಧಿಕಾರಿಗಳು ಅನೇಕ ಪ್ರಶ್ನೆ ಕೇಳುವಾಗ, ಐದು ನಿಮಿಷ ಸಮಯ ನೀಡಿ ಎಂದು ಹೇಳಿ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಕೇರಳದಿಂದ ವಿಚಾರಣೆಗೆ ಒಂದು ತಂಡ ಬಂದಿತ್ತು ಎಂಬ ಮಾಹಿತಿ ಇದೆ. ಈ ಬಗ್ಗೆ ದೆಹಲಿಯಿಂದಲೂ ವರದಿ ಕೇಳಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
ರಾಯ್ ಅವರು ಒಳ್ಳೆಯ ಉದ್ಯಮಿಗಳಾಗಿದ್ದರು, ಈ ರೀತಿ ಆಗಬಾರದಿತ್ತು, ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳ ಖಂಡಿಸುತ್ತೇನೆ, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

