ಕಾರ್ಪೊರೇಟ್ ಸಚಿವಾಲಯದ ಜೊತೆ ಕಂಪನಿಗಳ ತೆರಿಗೆ ಮಾಹಿತಿ ಹಂಚಿಕೊಳ್ಳಲಿರುವ ತೆರಿಗೆ ಇಲಾಖೆ

ಕಪ್ಪು ಹಣ ಸಂಗ್ರಹಣೆಯ ಹಾವಳಿಯನ್ನು ನಿಗ್ರಹಿಸಲು ಸರ್ಕಾರ ಪ್ರಯತ್ನ ಮಾಡುತ್ತಿದ್ದು ಅದರ ಭಾಗವಾಗಿ ಕಂಪೆನಿಗಳ ಪ್ಯಾನ್ ಮತ್ತು ಐಟಿಆರ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಪ್ಪು ಹಣ ಸಂಗ್ರಹಣೆಯ ಹಾವಳಿಯನ್ನು ನಿಗ್ರಹಿಸಲು ಸರ್ಕಾರ ಪ್ರಯತ್ನ ಮಾಡುತ್ತಿದ್ದು ಅದರ ಭಾಗವಾಗಿ ಕಂಪೆನಿಗಳ ಪ್ಯಾನ್ ಮತ್ತು ಐಟಿಆರ್ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಸದ್ಯದಲ್ಲಿಯೇ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜೊತೆಗೆ ಹಂಚಿಕೊಳ್ಳಲಿದೆ. 
ಸಂಗ್ರಹಣೆಯ ಮಾಹಿತಿಯನ್ನು ಹಂಚಿಕೊಳ್ಳುವುದರ ಪ್ರಮುಖ ಉದ್ದೇಶ  ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳುವ ಮತ್ತು ಅಕ್ರಮ ಹಣ ಸಾಗಣೆಯ ದುರುಪಯೋಗವನ್ನು ಮಾಡಿಕೊಳ್ಳುತ್ತಿರುವ ಸುಪ್ತ ಕಂಪೆನಿಗಳನ್ನು ಗುರುತಿಸುವುದಾಗಿದೆ.
ತೆರಿಗೆ ಇಲಾಖೆಗೆ ಯೋಜನೆಗಳನ್ನು ನಿರ್ಧರಿಸುವ ಕೇಂದ್ರ ನೇರ ತೆರಿಗೆಗಳ ಮಂಡಳಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಬೃಹತ್ ಐಟಿ ಅಂಕಿಅಂಶಗಳನ್ನು ಹಂಚಿಕೆ ಮಾಡಿಕೊಳ್ಳುವ ಕುರಿತು ಇಂದು ಆದೇಶವೊಂದನ್ನು ಬಿಡುಗಡೆ ಮಾಡಿದೆ.
ಪಿಟಿಐ ಸುದ್ದಿ ಸಂಸ್ಥೆಗೆ ಸಿಕ್ಕಿದ ಐಟಿ ಇಲಾಖೆಯ ಆದೇಶದ ಪ್ರಕಾರ, ಐಟಿ ಇಲಾಖೆ ಪ್ಯಾನ್ ಸಂಖ್ಯೆ, ಐಟಿಆರ್ ಮತ್ತು ಕಾರ್ಪೊರೇಟ್ ಗಳ ಲೆಕ್ಕಪತ್ರ ವರದಿಗಳನ್ನು ಮತ್ತು ಹಣಕಾಸು ವಹಿವಾಟಿನ ಹೇಳಿಕೆಗಳನ್ನು ಐಟಿ ಕಾಯ್ದೆ 44 ಎಬಿಯಡಿ ಹಂಚಿಕೊಳ್ಳಲಿದೆ.
ಅಂಕಿಅಂಶಗಳ ಹಂಚಿಕೆ ಕುರಿತು ಆದಾಯ ತೆರಿಗೆ ಇಲಾಖೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸದ್ಯದಲ್ಲಿಯೇ ಗೊತ್ತುವಳಿ ಒಪ್ಪಂದಕ್ಕೆ ಸಹಿ ಹಾಕಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com