ಐಡಿಯಾ ಸೆಲ್ಯೂಲರ್-ವೋಡಾಫೋನ್ ಇಂಡಿಯಾ ವಿಲೀನ ಘೋಷಣೆ

ಐಡಿಯಾ ಸೆಲ್ಯೂಲರ್ ಹಾಗೂ ವೋಡಾಫೋನ್ ಇಂಡಿಯಾ ಮೊಬೈಲ್ ನೆಟ್ವರ್ಕ್ ಸಂಸ್ಥೆಗಳು ಬಹುನಿರೀಕ್ಷಿತ ಒಪ್ಪಂದವನ್ನು ಮಾ.20 ರಂದು ಅಧಿಕೃತವಾಗಿ ಘೋಷಿಸಿವೆ.
ಐಡಿಯಾ ಸೆಲ್ಯೂಲರ್-ವೋಡಾಫೋನ್ ಇಂಡಿಯಾ ವಿಲೀನ ಘೋಷಣೆ
ಐಡಿಯಾ ಸೆಲ್ಯೂಲರ್-ವೋಡಾಫೋನ್ ಇಂಡಿಯಾ ವಿಲೀನ ಘೋಷಣೆ
ನವದೆಹಲಿ: ಐಡಿಯಾ ಸೆಲ್ಯೂಲರ್ ಹಾಗೂ ವೋಡಾಫೋನ್ ಇಂಡಿಯಾ ಮೊಬೈಲ್ ನೆಟ್ವರ್ಕ್ ಸಂಸ್ಥೆಗಳು ಬಹುನಿರೀಕ್ಷಿತ ಒಪ್ಪಂದವನ್ನು ಮಾ.20 ರಂದು ಅಧಿಕೃತವಾಗಿ ಘೋಷಿಸಿವೆ.
ವಿಲೀನ ಪ್ರಕ್ರಿಯೆ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಐಡಿಯಾ ಸೆಲ್ಯೂಲರ್ ಸಂಸ್ಥೆ, ತನ್ನ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು ವೋಡಾಫೋನ್ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದು, ವಿಲೀನಗೊಳ್ಳಲಿದೆ ಎಂದು ಹೇಳಿದೆ. ಜಂಟಿ ಸಂಸ್ಥೆಯಲ್ಲಿ ವೋಡಾಫೋನ್ ಶೇ.45.1 ರಷ್ಟು ಪಾಲನ್ನು ಹೊಂದಿರಲಿದೆ. ಪ್ರಾರಂಭದಲ್ಲಿ ಶೇ.26 ರಷ್ಟು ಪಾಲನ್ನು ಹೊಂದಲಿರುವ ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆಯ ಐಡಿಯಾ ಸೆಲ್ಯೂಲರ್ ನಂತರದ ದಿನಗಳಲ್ಲಿ ಪಾಲುದಾರಿಕೆಯನ್ನು ಸಮವಾಗಿಸಿಕೊಳ್ಳಲು ಹೆಚ್ಚಿನ ಷೇರುಗಳನ್ನು ಖರೀದಿಸುವ ಹಕ್ಕು ಹೊಂದಿದೆ ಎಂದು ಐಡಿಯಾ ಸಂಸ್ಥೆ ಹೇಳಿದೆ. 
"ಐಡಿಯಾ-ವೋಡಾಫೋನ್ ಸಂಸ್ಥೆಗಳು ಸೇರಿ ಮೌಲ್ಯಯುತವಾದ ಮೊಬೈಲ್ ನೆಟ್ವರ್ಕ್ ಸಂಸ್ಥೆಯನ್ನು ಹುಟ್ಟುಹಾಕಲಿವೆ" ಎಂದು ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಹೇಳಿದ್ದಾರೆ. ಐಡಿಯಾ-ವೋಡಾಫೋನ್ ಸಂಸ್ಥೆಗಳ ವಿಲೀನ ಡಿಜಿಟಲ್ ಇಂಡಿಯಾದ ಹೊಸ ಚಾಂಪಿಯನ್ ನ್ನು ಸೃಷ್ಟಿಸಲಿದ್ದು, ಗ್ರಾಮೀಣ ಭಾಗಕ್ಕೂ ವಿಶ್ವದರ್ಜೆಯ 4 ಜಿ ನೆಟ್ವರ್ಕ್ ಗಳನ್ನು ಪೂರೈಕೆ ಮಾಡಲಿದೆ ಎಂದು ವೋಡಾಫೋನ್ ನ ಮುಖ್ಯ ಕಾರ್ಯನಿರ್ವಾಹಕ ವಿಟ್ಟೋರಿಯೋ ಕೊಲಾವೋ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com