ಡೈಮಂಡ್ ಮೇಲೆ ಹೂಡಿಕೆ ಮಾಡುತ್ತಿದ್ದೀರಾ? ಇಲ್ಲಿವೆ ಕೆಲವು ಸಲಹೆ

ಡೈಮಂಡ್ ಮೇಲೆ ಹೂಡಿಕೆ ಮಾಡುವಾಗ ಬಣ್ಣ, ಆಕಾರ ಹಾಗೂ ದುಬಾರಿ ಬೆಲೆಯ ಸ್ಟೋನ್ ಕಟ್ ಬಗ್ಗೆ ಎಚ್ಚರಿಕೆ ವಹಿಸುವುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಡೈಮಂಡ್ ಮೇಲೆ ಹೂಡಿಕೆ ಮಾಡುವಾಗ ಬಣ್ಣ, ಆಕಾರ ಹಾಗೂ ದುಬಾರಿ ಬೆಲೆಯ ಸ್ಟೋನ್ ಕಟ್ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ ಎಂದು ತಜ್ಞರು ಹೇಳುತ್ತಾರೆ.
ಎಂಟಿಕದಲ್ಲಿ ಕ್ರಿಯೆಟಿವ್ ನಿರ್ದೇಶಕರಾಗಿರುವ ಮಂಜು ಕಠಾರಿ ಹಾಗೂ ದ್ವಾರಕದಾಸ್ ಚಂದಮಾಲ್ ಜ್ಯುವೆಲ್ಲರ್ಸ್ ನಿರ್ದೇಶಕ ರಾಜೇಶ್ ತುಲ್ಸಿಯಾನಿ ಅವರು ಡೈಮಂಡ್ ಮೇಲೆ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
  • ಉತ್ತಮ ಬಣ್ಣ ಹಾಗೂ ಸ್ಪಷ್ಟತೆ ಹೊಂದಿರುವ ಡೈಮಂಡರ್ ಖರೀದಿಸುವುದು ಉತ್ತಮ. ಇದು ಉತ್ತಮ ಮರು ಮಾರಾಟ ಮೌಲ್ಯವನ್ನು ಹೊಂದಿರುತ್ತದೆ.
  • ಡೈಮಂಡ್ ಖರೀದಿಸುವ ಮುನ್ನ ಅಂಗಡಿಯ ಬಗ್ಗೆ ಮತ್ತು ಡೈಮಂಡ್ ಡಿಸೈನ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.
  • ಎರಡು ವಜ್ರಗಳು ಸಮಾನ ಕ್ಯಾರೆಟ್ ತೂಕದದ್ದಾಗಿರುತ್ತವೆ ಆದರೆ ಅವುಗಳ ಕಟ್, ಬಣ್ಣ ಮತ್ತು ಸ್ಪಷ್ಟತೆ ಪ್ರಕಾರ ಮೌಲ್ಯದಲ್ಲಿ ಭಿನ್ನವಾಗಿರುತ್ತವೆ. ವಜ್ರದ 4 ಸಿಗಳನ್ನು ಅಧ್ಯಯನ ಮಾಡಿ ಮತ್ತು ಅದನ್ನು ನಿಮ್ಮ ಬಜೆಟ್ನಲ್ಲಿ ಹೊಂದಿಸಲು ಮರೆಯದಿರಿ.
  • ಡೈಮಂಡ್ ಖರೀದಿಸುವ ಒಂದು ಪ್ರಾಯೋಗಿಕ ಬಜೆಟ್ ನಿಮ್ಮ ಮನಸ್ಸಿನಲ್ಲಿ ಇರುವುದು ಒಳ್ಳೆಯದು. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವರೈಟಿ ಬಗ್ಗೆ ನೀವು ಗೊಂದಲಕ್ಕಿಡಾಗು ಸಾಧ್ಯತೆ ಇರುತ್ತದೆ.
  • ವಜ್ರಗಳನ್ನು ಕೊಳ್ಳುವಾಗ ಬಜೆಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನೀವು ಖರೀದಿಸುವ ಮುನ್ನ ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಮೂಲಕ ಹಣಕ್ಕೆ ಮೌಲ್ಯವನ್ನು ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com