ಜಿಎಸ್ ಟಿ ಜಾರಿಯಿಂದ ಸ್ಮಾರ್ಟ್ ಫೋನ್, ವೈದ್ಯಕೀಯ ಉಪಕರಣಗಳ ದರ ಅಗ್ಗ!

ಜಿಎಸ್ ಟಿ ಜಾರಿಯಾದ ಬಳಿಕ ಸ್ಮಾರ್ಟ್ ಫೋನ್ ಗಳ ದರ ಹೆಚ್ಚಾಗಲಿದೆ ಎಂದು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿದೆ.
ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್
ನವದೆಹಲಿ: ಜಿಎಸ್ ಟಿ ಜಾರಿಯಾದ ಬಳಿಕ ಸ್ಮಾರ್ಟ್ ಫೋನ್ ಗಳ ದರ ಹೆಚ್ಚಾಗಲಿದೆ ಎಂದು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿದೆ. 
ಮೇ.18 ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ಉತ್ಪನ್ನಗಳಿಗೆ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ವಿಸ್ತೃತ ವರದಿ ಹಾಗೂ ಜಿಎಸ್ ಟಿ ಜಾರಿಯ ನಂತರ  ವಿವಿಧ ಉತ್ಪನ್ನಗಳ ಮೇಲೆ ಬೀಳುವ ತೆರಿಗೆಯ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. 
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜಿಎಸ್ ಟಿ ಜಾರಿಯ ನಂತರ ಸ್ಮಾರ್ಟ್ ಫೋನ್ ಗಳಷ್ಟೇ ಅಲ್ಲದೇ, ವೈದ್ಯಕೀಯ ಉಪಕರಣಗಳ ಬೆಲೆಯೂ ಅಗ್ಗವಾಗಲಿದೆ ಎಂದು ಹೇಳಿದೆ. 
ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಮಾತ್ರ ಜಿಎಸ್ ಟಿ ಜಾರಿ ನಂತರ ಸ್ಮಾರ್ಟ್ ಫೋನ್ ಗಳ ಬೆಲೆ ಏರಿಕೆಯಾಗಲಿದೆ ಎಂದು ಹೇಳುತ್ತಿದ್ದರೆ, ಕೇಂದ್ರ ಸರ್ಕಾರ ಮೊಬೈಲ್ ತಯಾರಿಕಾ ಸಂಸ್ಥೆಗಳಿಗಿಂತ ಭಿನ್ನವಾದ ಹೇಳಿಕೆ ನೀಡುತ್ತಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಕೇಂದ್ರ ಸರ್ಕಾರ, ಕೇಂದ್ರ ಅಬಕಾರಿ ಸುಂಕ, ವ್ಯಾಟ್ (ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ) ಸೇರಿದಂತೆ ಸ್ಮಾರ್ಟ್ ಫೋನ್ ಗಳಿಗೆ ಒಟ್ಟು ಶೇ.13.5 ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಜಿಎಸ್ ಟಿ ಜಾರಿಯಿಂದ ತೆರಿಗೆ ಶೇ.12ಕ್ಕೆ ಇಳಿಕೆಯಾಗಲಿದೆ ಎಂದು ತಿಳಿಸಿದೆ. 
ಇನ್ನು ವೈದ್ಯಕೀಯ ಉಪಕರಣಗಳಿಗೂ ಸಹ ಇದೇ ಮಾದರಿ ಅನ್ವಯವಾಗಲಿದ್ದು, ಪ್ರಸ್ತುತ ಒಟ್ಟಾರೆ ಇರುವ ಶೇ.13 ರಷ್ಟು ತೆರಿಗೆ ಶೇ.12 ಕ್ಕೆ ಇಳಿಕೆಯಾಗಲಿದ್ದು, ವೈದ್ಯಕೀಯ ಉಪಕರಣಗಳ ಬೆಲೆಯೂ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com