ಸಾಂದರ್ಭಿಕ ಚಿತ್ರ
ವಾಣಿಜ್ಯ
ಬೆಲೆ ಕಡಿತ ಮತ್ತು ಕಡಿಮೆ ವೆಚ್ಚದ ಲಾಭ ಗ್ರಾಹಕರಿಗೆ ನೀಡಲು ಟೆಲಿಕಾಂ ಕಂಪೆನಿಗಳಿಗೆ ಸರ್ಕಾರ ಸೂಚನೆ
ಜುಲೈಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ದರ ಕಡಿತ...
ನವದೆಹಲಿ: ಜುಲೈಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ದರ ಕಡಿತ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುವಂತೆ ಮತ್ತು ವೆಚ್ಚವನ್ನು ಮರು ಹಂಚಿಕೆ ಮಾಡಿಕೊಳ್ಳುವಂತೆ ಹಣಕಾಸು ಸಚಿವಾಲಯ ನಿನ್ನೆ ದೂರಸಂಪರ್ಕ ಕಂಪೆನಿಗಳಿಗೆ ಸೂಚಿಸಿದೆ.
ಸರಕು ಮತ್ತು ಸೇವಾ ತೆರಿಗೆಯಡಿ ದೂರಸಂಪರ್ಕ ಸೇವೆಗಳಿಗೆ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಸೇವಾ ಪೂರೈಕೆದಾರರು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ)ನ ಹಕ್ಕು ಕೇಳಬಹುದು.
ದೂರಸಂಪರ್ಕ ಕಂಪೆನಿಗಳು ತಮ್ಮ ವೆಚ್ಚ ಮತ್ತು ಕ್ರೆಡಿಟ್ ಲಭ್ಯತೆಗಳ ಬಗ್ಗೆ ಮರು ಕೆಲಸ ಮಾಡಿ ಬೆಲೆಯನ್ನು ಮರು ಹಂಚಿಕೆ ಮಾಡುವಂತೆ ಮತ್ತು ಉಳಿಕೆ ಹಣದ ಲಾಭವಲನ್ನು ಗ್ರಾಹಕರಿಗೆ ಅವರ ಬಳಕೆ ವೆಚ್ಚದಲ್ಲಿ ಕಡಿತ ಮಾಡುವ ಮೂಲಕ ನೀಡುವಂತೆ ಸಚಿವಾಲಯ ತಿಳಿಸಿದೆ.
ಪ್ರಸ್ತುತ ದೂರಸಂಪರ್ಕ ಸೇವೆಗಳಿಗೆ ಶೇಕಡಾ 14 ಸೇವಾ ತೆರಿಗೆ ಇದ್ದು ಅದರೊಟ್ಟಿಗೆ ಸ್ವಚ್ಛ ಭಾರತ್ ಸೆಸ್ ಮತ್ತು ಕೃಷಿ ಕಲ್ಯಾಣ ಸೆಸ್ ಗಳು ತಲಾ 0.5ರಷ್ಟಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ