ಸಾರ್ವಜನಿಕ ಬ್ಯಾಂಕ್ ಗಳ ಸಂಖ್ಯೆ ಇಳಿಕೆ ಮಾಡಲು ಕೇಂದ್ರ ಸರ್ಕಾರದ ಚಿಂತನೆ: ವಿತ್ತ ಸಚಿವಾಲಯ

ಈ ಹಿಂದೆ ಬೃಹತ್ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಗೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ದಾರಿಯಲ್ಲಿ ಸಾಗಿದ್ದು, ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನದತ್ತ ಮುಖ ಮಾಡಿದೆ.
ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ (ಸಂಗ್ರಹ ಚಿತ್ರ)
ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ (ಸಂಗ್ರಹ ಚಿತ್ರ)
ನವದೆಹಲಿ: ಈ ಹಿಂದೆ ಬೃಹತ್ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಗೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ದಾರಿಯಲ್ಲಿ ಸಾಗಿದ್ದು, ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನದತ್ತ ಮುಖ ಮಾಡಿದೆ.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವಂತೆ ಪ್ರಸ್ತುತ ದೇಶದಲ್ಲಿರುವ ಸುಮಾರು 21 ಸಾರ್ವಜನಿಕ ಬ್ಯಾಂಕ್ ಗಳ ಸಂಖ್ಯೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿಗೆ. ಇದಕ್ಕಾಗೆ ಕೆಲ ಪ್ರಮುಖ  ಬ್ಯಾಂಕ್ ಗಳಲ್ಲಿ ಸಣ್ಣ ಗಾತ್ರದ ಬ್ಯಾಂಕ್ ಗಳನ್ನು ವಿಲೀನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಪ್ರಸ್ತುತ ಇರುವ 21 ಸಾರ್ವಜನಿಕ ಬ್ಯಾಂಕ್ ಗಳ ಸಂಖ್ಯೆಯನ್ನು 10 ರಿಂದ 15ಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು  ತಿಳಿದುಬಂದಿದೆ.

ಒಮ್ಮೆಲೇ ಎಲ್ಲ ಬ್ಯಾಂಕ್ ಗಳನ್ನು ವಿಲೀನ ಮಾಡುವುದರಿಂದ ಭಾರಿ ಪ್ರಮಾಣದ ಸಮಸ್ಯೆ ಎದುರಾಗುತ್ತದೆ ಇದೇ ಕಾರಣಕ್ಕೆ 10 ರಿಂದ 15 ಬ್ಯಾಂಕ್ ಗಳಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.  ಪ್ರಸ್ತುತ ದೇಶದ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ ನಂತೆಯೇ ವಿಲೀನ ಪ್ರಕ್ರಿಯೆ ಮಾಡುವುದಿಲ್ಲ. ಒಂದೇ ಬ್ಯಾಂಕಿಗೆ ಎಲ್ಲ ಬ್ಯಾಂಕ್ ಗಳನ್ನು ವಿಲೀನ ಮಾಡುವುದರಿಂದ ಭಾರಿ ಪ್ರಮಾಣದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ  ಅಂತಹ ನಿರ್ಧಾರ ಕೈಗೊಳ್ಳುವುದಿಲ್ಲ. ಆದರೆ ಕಾರ್ಯವಿಧಾನಕ್ಕೆ ಅನುಗುಣವಾಗಿ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತದೆ ಎಂದು ವಿತ್ತ ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಎಕನಾಮಿಕ್ ಸಮಿತ್ ನಲ್ಲಿ ಪಾಲ್ಗೊಂಡು ಮಾತನಾಡಿದ ಸನ್ಯಾಲ್ ಅವರು, ಯಾವುದೇ ಬ್ಯಾಂಕ್ ಸಂಸ್ಥೆಗಳಿಗೂ ತೀರಿಸದ ಸಾಲ ದೊಡ್ಡ ಹೊರೆಯಾಗುತ್ತದೆ. ಹೀಗಾಗಿ ಸಾಲ ವಸೂಲಾತಿಗೆ ಕಠಿಣ ಕ್ರಮಗಳ  ಜಾರಿ ಅವಶ್ಯಕವಾಗಿದೆ. ಹೀಗಾಗಿ ದಿವಾಳಿತನ ಪ್ರಕ್ರಿಯೆ ಸಂಬಂಧ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com