ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!

ನವೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ಮದುವೆ ಸೀಸನ್ ನ ವ್ಯಾಪಾರಕ್ಕೆ ನೋಟು ನಿಷೇಧ, ಜಿಎಸ್ ಟಿ ಜಾರಿಯಾಗಿರುವುದು ಶೇ.10-15 ರಷ್ಟು ಪರಿಣಾಮ ಬೀರಲಿದೆ ಎಂದು ಇಂಡಸ್ಟ್ರಿ ಚೇಂಬರ್ಸ್ ಅಸೋಚಾಮ್....
ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!
ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!
ನವದೆಹಲಿ: ನವೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ಮದುವೆ ಸೀಸನ್ ನ ವ್ಯಾಪಾರಕ್ಕೆ ನೋಟು ನಿಷೇಧ, ಜಿಎಸ್ ಟಿ ಜಾರಿಯಾಗಿರುವುದು ಶೇ.10-15 ರಷ್ಟು ಪರಿಣಾಮ ಬೀರಲಿದೆ ಎಂದು ಇಂಡಸ್ಟ್ರಿ ಚೇಂಬರ್ಸ್ ಅಸೋಚಾಮ್ ಹೇಳಿದೆ. 
ಕಲ್ಯಾಣ ಮಂಟಪ, ಮ್ಯಾರೇಜ್ ಗಾರ್ಡನ್, ಟೆಂಟ್ ಬುಕ್ಕಿಂಗ್, ಫೋಟೋಗ್ರಫಿ ಕ್ಷೇತ್ರಗಳಲ್ಲಿ ಜಿಎಸ್ ಟಿ, ನೋಟು ನಿಷೇಧ ಪರಿಣಾಮ ಬೀರಲಿದೆ ಎಂದು ಅಸೋಚಾಮ್ ವಿಶ್ಲೇಷಿಸಿದೆ. 
ಈಗ ಭಾರತೀಯ ವಿವಾಹ ಇಂಡಸ್ಟ್ರಿಯಿಂದ ಒಟ್ಟಾರೆ 1 ಟ್ರಿಲಿಯನ್ ರೂಪಾಯಿ ನಷ್ಟು ವಹಿವಾಟು ನಡೆಯುತ್ತಿದ್ದು, ವಾರ್ಷಿಕವಾಗಿ ಶೇ.25-30 ರಷ್ಟು ಬೆಳವಣಿಗೆಯಾಗುತ್ತಿದೆ.  
ಶಾಪಿಂಗ್, ಟೆಂಟ್ ಬುಕ್ಕಿಂಗ್, ಊಟದ ವ್ಯವಸ್ಥೆ ಇತ್ಯಾದಿಗಳ ಖರ್ಚು ಜಿಎಸ್ ಟಿ ಜಾರಿಯಿಂದ ಹೆಚ್ಚಾಗಲಿದೆ. ಜಿಎಸ್ ಟಿ ಜಾರಿಗೂ ಮುನ್ನ ಈ ಸೇವೆಗಳ ಬಿಲ್ ನ್ನು ನೋಂದಣಿ ರಹಿತವಾಗಿ ನೀಡುತ್ತಿದ್ದುದ್ದರಿಂದ ತೆರಿಗೆಯ ಹೊರೆ ಇರುತ್ತಿರಲಿಲ್ಲ, ಆದರೆ ಈಗ ಜಿಎಸ್ ಟಿ ಜಾರಿಯಾದ ನಂತರ ಬೆಲೆ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com