ಜುಲೈ ಅವಧಿಯ ಜಿಎಸ್ ಟಿಆರ್-2, ಜಿಎಸ್ ಟಿ ಆರ್-3 ಸಲ್ಲಿಕೆ ಅವಧಿ ಮತ್ತೆ ವಿಸ್ತರಿಸಿದ ಕೇಂದ್ರ

ಕೇಂದ್ರ ಸರ್ಕಾರ ಜುಲೈ ಅವಧಿಯ ಜಿಎಸ್ ಟಿ ರಿಟರ್ನ್ಸ್ -2 ಮತ್ತು ಜಿಎಸ್ ಟಿ ರಿಟರ್ನ್ಸ್ -3 ದಾಖಲಿಸುವ ಕಡೆಯ ದಿನಾಂಕವನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಜುಲೈ ಅವಧಿಯ ಜಿಎಸ್ ಟಿ ರಿಟರ್ನ್ಸ್ -2 ಮತ್ತು ಜಿಎಸ್ ಟಿ ರಿಟರ್ನ್ಸ್ -3 ದಾಖಲಿಸುವ ಕಡೆಯ ದಿನಾಂಕವನ್ನು ಸೋಮವಾರ ವಿಸ್ತರಿಸಿದೆ.
ಮಾರಾಟ ಮತ್ತು ಖರೀದಿ ಡೇಟಾ ಮತ್ತು ತೆರಿಗೆ ಪಾವತಿಗೆ ಸಂಬಂಧಿಸಿದ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ಇಂದು ಮೂರನೇ ಬಾರಿ ವಿಸ್ತರಣೆ ಮಾಡಿದ್ದು, ಜುಲೈಗೆ ಸಂಬಂಧಿಸಿದ ಖರೀದಿ ರಿಟರ್ನ್ಸ್ ಅಥವಾ ಜಿಎಸ್ ಟಿಆರ್-2 ಅನ್ನು ದಾಖಲಿಸುವ ಅವಧಿಯನ್ನು ಜುಲೈ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಇನ್ನು ಜಿಎಸ್ ಟಿಆರ್-3 ದಾಖಲಿಸುವ ದಿನಾಂಕವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ. ಜಿಎಸ್ ಟಿಆರ್ -2 ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದರೆ, ಜಿಎಸ್ ಟಿಆರ್ -3 ಸಲ್ಲಿಸಲು ನವೆಂಬರ್ 10 ಕಡೆಯ ದಿನವಾಗಿತ್ತು. ಈ ಅದನ್ನು ನವೆಂಬರ್ 30 ಮತ್ತು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಟ್ವೀಟ್ ಮಾಡಿದೆ.
ಜುಲೈ ಅವಧಿಯ ಜಿಎಸ್ ಟಿಆರ್-2, ಜಿಎಸ್ ಟಿ ಆರ್-3 ಸಲ್ಲಿಕೆ ಅವಧಿ ವಿಸ್ತರಿಸಿರುವ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ವಿತ್ತ ಸಚಿವಾಲಯ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com