ಆಟೋ ಕನೆಕ್ಟ್ ವೈ ಫೈ: ಓಲಾದಿಂದ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಫೈ ಸೌಲಭ್ಯ ಘೋಷಣೆ

ಅಪ್ಲಿಕೇಷನ್ ಆಧಾರಿತ ಸಾರಿಗೆ ಸಂಸ್ಥೆ ಓಲಾ ಇದೀಗ ತನ್ನ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಪೈ ನೀದಲು ಮುಂದಾಗಿದೆ. 'ಆಟೋ-ಕನೆಕ್ಟ್ ವೈ ಫೈ' ಎನ್ನುವ ಹೆಸರಿನಲ್ಲಿ ಉಚಿತ ವೈ ಪೈ ಸೌಲಭ್ಯ ಒದಗಿಸಲು....
ಆಟೋ ಕನೆಕ್ಟ್ ವೈ ಫೈ: ಓಲಾದಿಂದ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಫೈ ಸೌಲಭ್ಯ ಘೋಷಣೆ
ಆಟೋ ಕನೆಕ್ಟ್ ವೈ ಫೈ: ಓಲಾದಿಂದ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಫೈ ಸೌಲಭ್ಯ ಘೋಷಣೆ
ನವದೆಹಲಿ: ಅಪ್ಲಿಕೇಷನ್ ಆಧಾರಿತ ಸಾರಿಗೆ ಸಂಸ್ಥೆ ಓಲಾ ಇದೀಗ ತನ್ನ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಪೈ ನೀದಲು ಮುಂದಾಗಿದೆ. 'ಆಟೋ-ಕನೆಕ್ಟ್  ವೈ ಫೈ' ಎನ್ನುವ ಹೆಸರಿನಲ್ಲಿ ಉಚಿತ ವೈ ಪೈ ಸೌಲಭ್ಯ ಒದಗಿಸಲು ಓಲಾ ನಿರ್ಧರಿಸಿದೆ. ಬೇಡಿಕೆ ಸೇವೆ, ಮತ್ತು ಪಾರದರ್ಶಕ ಬೆಲೆಗಳಂತಹ ಗ್ರಾಹಕ ಸ್ನೇಹಿ ಕೊಡುಗೆಗಳೊಂದಿಗೆ ಉಚಿತ ವೈಫೈ ಅಂತರ್ಜಾಲ ಸಂಪರ್ಕವನ್ನು ಸೇರಿಸುವ ಮೂಲಕ ಓಲಾ ಇನ್ನಷ್ಟು ಗ್ರಾಹಕರನ್ನು ಸೆಳೆಯುವತ್ತ ಚಿತ್ತ ನೆಟ್ಟಿದೆ.
"ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರಯಾಣ ಮಾರ್ಗದಲ್ಲಿ ಆನ್ ಲೈನ್ ನಲ್ಲಿಯೂ ಇರುವ ಮೂಲಕ ನಾವು ಸಾರಿಗೆ ವಲಯದಲ್ಲಿ ಇದಾಗಲೇ ಮುಂಚೂಣಿಯಲ್ಲಿದ್ದೇವೆ, ಇದೀಗ ಆಟೋ-ಕನೆಕ್ಟ್  ವೈಫೈ ನೊಂದಿಗೆ, ನಾವು ತ್ರಿಚಕ್ರ ವಾಹನಗಳ ಸಂಚಾರದಲ್ಲಿ ನಮ್ಮ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುತ್ತೇವೆ" ಹಿರಿಯ ನಿರ್ದೇಶಕ, ಆಟೋ ವಿಭಾಗದ ಮುಖ್ಯಸ್ಥ, ಸಿದ್ದಾರ್ಥ್ ಅಗರ್ವಾಲ್ ಹೇಳಿದರು.
"ನಮ್ಮ ಸ್ವಯಂ-ಕನೆಚ್ಟ್ ವೈಫೈ ಯೋಜನೆಯನ್ನು ಡೀಜಿಟಲ್ ಇಂಡಿಯಾದಂತಹಾ ಸರ್ಕಾರದ ಪ್ರಮುಖ ಉಪಕ್ರಮಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ನವೀನ ಮಾದರಿಯ ಮೂಲಕ, ಪ್ರಯಾಣದದಲ್ಲಿ ಕಳೆದ ಸಮಯದ ಗುಣಮಟ್ಟವನ್ನು ಸುಧಾರಿಸಲು ನಾವು ಬಯಸುವುದಷ್ಟೇ ಅಲ್ಲದೆ  ದೇಶಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಸುಲಭ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಿದ್ದೇವೆ" ಅಗರ್ವಾಲ್ ಹೇಳಿದ್ದಾರೆ.
ಇದೇ ವೇಳೆ ಓಲಾ ಪ್ರೈಮ್ ನಲ್ಲಿನ ವೈ ಫೈ ಬಳಕೆ ಇದಾಗಲೇ ಜನಪ್ರಿಯವಾಗಿದ್ದು ಅರಿಶೀಘ್ರದಲ್ಲಿ ಓಲಾ ಮಿನಿ, ಲಕ್ಸ್, ಮೈಕ್ರೋ ಸೇವೆಗಳಿಗೂ ಈ ವೈ ಫೈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com