ಭವಿಷ್ಯದಲ್ಲಿ ಜಿಡಿಪಿ 7-7.5 ಕ್ಕೆ ಏರಿಕೆಯಾಗಲಿದೆ: ರಾಜೀವ್ ಕುಮಾರ್

ರ್ಥಿಕ ಬೆಳವಣಿಗೆಯು 2017-18ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್‌) ಶೇ.7-7.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ
ನೀತಿ ಆಯೋಗ
ನೀತಿ ಆಯೋಗ
ಹೊಸದಿಲ್ಲಿ: ಆರ್ಥಿಕ ಬೆಳವಣಿಗೆಯು 2017-18ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್‌) ಶೇ.7-7.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ನೀತಿ ಆಯೋಗದ ನೂತನ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.
ಜಿಎಸ್‌ಟಿ ಪದ್ಧತಿಯಲ್ಲಿ ಉಂಟಾಗಿರುವ ಆರಂಭಿಕ ಗೊಂದಲಗಳು ನಿವಾರಣೆ ಆಗಲಿದ್ದು ಮುಂಗಾರು ಉತ್ತಮವಾಗಿರುವದರಿಂದ, ಆರ್ಥಿಕ ಬೆಳವಣಿಗೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ರಾಜೀವ್‌ ಕುಮಾರ್‌ ಇಂದಿಲ್ಲಿ ತಿಳಿಸಿದ್ದಾರೆ. 
"ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.7ರಿಂದ 7.5ಕ್ಕೆ ಏರಿಕೆಯಾಗುವ ವಿಶ್ವಾಸ ನನಗಿದೆ. ಜಿಎಸ್‌ಟಿ ಕುರಿತ ಗೊಂದಲಗಳು ಈಗ ಬಗೆಹರಿದಿವೆ. ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ಸ್ಪಷ್ಟತೆ ಉಂಟಾಗಿದೆ'' ಎಂದು ಕುಮಾರ್‌ ಹೇಳಿದರು. ಅ
ರವಿಂದ್‌ ಪನಗಾರಿಯಾ ರಾಜೀನಾಮೆಯಿಂದ ತೆರವಾಗಿದ್ದ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್‌ ಕುಮಾರ್‌ ನೇಮಕವಾಗಿದ್ದಾರೆ.
ಭಾರತದ ಜಿಡಿಪಿ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್‌)ಉತ್ಪಾದನಾ ವಲಯದಲ್ಲಿನ ಮಂದಗತಿ  ಕಾರಣದಿಂದ ಶೇ.5.7ಕ್ಕೆ ಕುಸಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com