
ನವದೆಹಲಿ: ಶತಕೋಟಿ ಆಭರಣ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಿಂದ ಆಗಿರುವ ತೊಂದರೆಯನ್ನು ಸರ್ಕಾರದ ನೆರವು ಇಲ್ಲದೆ ತಾನೇ ನೋಡಿಕೊಳ್ಳಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಮೆಹ್ತಾ ತಿಳಿಸಿದ್ದಾರೆ.
ವಂಚನೆ ಪ್ರಕರಣದಿಂದ ಉಂಟಾಗಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ಬ್ಯಾಂಕಿನಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂದು ಹೇಳಿದ್ದಾರೆ.
ಇದು ಬ್ಯಾಂಕಿನ ಸಮಸ್ಯೆಯಾಗಿದ್ದು ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಬಂಡವಾಳೀಕರಣದ ಮೂಲಕ ಸರ್ಕಾರದ ಸಹಾಯವನ್ನು ನಾವು ನಿರೀಕ್ಷಿಸುತ್ತಿಲ್ಲ ಎಂದು ಸುದ್ದಿಸಂಸ್ಥೆಗೆ ಉತ್ತರಿಸಿದ್ದಾರೆ.
ಮರುಸಮೀಕ್ಷೆ ಯೋಜನೆಯ ಮೂಲಕ ಸರ್ಕಾರ ಸಹಾಯ ಮಾಡಲು ಮುಂದಾಗಿತ್ತು. ಪಂಜಾಬ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾಕಷ್ಟು ಬಂಡವಾಳ ಇರುವುದರಿಂದ ನಾವು ಯಾವುದೇ ಹೆಚ್ಚುವರಿ ಬೆಂಬಲ ಮತ್ತು ನೆರವು ಕೋರಲಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕು 12,000 ಕೋಟಿ ರೂಪಾಯಿ ಸಂಗ್ರಹಿಸಿದೆ. ಅರ್ಹವಾದ ಸಾಂಸ್ಥಿಕ ಉದ್ಯೋಗ ಮೂಲಕ 5,000ಕೋಟಿ ರೂ ಸಂಗ್ರಹಿಸಿದೆವು. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹೌಸಿಂಗ್ ಫೈನಾನ್ಸ್ ಮೂಲಕ 1,3000 ಕೋಟಿ ರೂ ಮತ್ತು ಸರ್ಕಾರದಿಂದ ಒಳಗೊಳ್ಳುವಿಕೆಯಿಂದ 5,4000 ಕೋಟಿ ರೂಪಾಯಿ ಸಿಕ್ಕಿದೆ ಎಂದು ಹೇಳಿದರು.
ಕಳೆದ ಹಣಕಾಸು ವರ್ಷದ ಮೂರು ತ್ರೈಮಾಸಿಕದಲ್ಲಿ 1,100 ಕೋಟಿ ರೂಪಾಯಿ ಜೊತೆಗೆ ಸಂಗ್ರಹಿತ ಹಣವನ್ನು ಕೂಡ ಸಂಪಾದಿಸಲಾಗಿದೆ. ಇಷ್ಟು ಹಣ ನಷ್ಟವನ್ನು ಸರಿದೂಗಿಸಲು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಸುನಿಲ್ ಮೆಹ್ತಾ ಹೇಳಿದರು.
Advertisement