ಬ್ಯಾಂಕ್ ವಂಚನೆ: ಸಿಬಿಐನಿಂದ ಮಾಜಿ ಯುಕೋ ಬ್ಯಾಂಕ್ ಸಿಎಂಡಿ ಸೇರಿ ಹಲವರ ವಿಚಾರಣೆ

621 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಯುಕೋ ಬ್ಯಾಂಕ್ ಮಾಜಿ ಸಿಎಂಡಿ ಅರುಣ್ ಕೌಲ್ ಹಾಗೂ ಇತರರ ವಿರುದ್ಧ ಸಿಬಿಐ ವಿಚಾರಣೆ ನಡೆಸಿದೆ.
ಬ್ಯಾಂಕ್ ವಂಚನೆ: ಸಿಬಿಐನಿಂದ ಮಾಜಿ ಯುಕೋ ಬ್ಯಾಂಕ್ ಸಿಎಂಡಿ ಸೇರಿ ಹಲವರ ವಿಚಾರಣೆ
ಬ್ಯಾಂಕ್ ವಂಚನೆ: ಸಿಬಿಐನಿಂದ ಮಾಜಿ ಯುಕೋ ಬ್ಯಾಂಕ್ ಸಿಎಂಡಿ ಸೇರಿ ಹಲವರ ವಿಚಾರಣೆ
ನವದೆಹಲಿ: 621 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ  ಯುಕೋ ಬ್ಯಾಂಕ್ ಮಾಜಿ ಸಿಎಂಡಿ ಅರುಣ್ ಕೌಲ್ ಹಾಗೂ ಇತರರ ವಿರುದ್ಧ ಸಿಬಿಐ ವಿಚಾರಣೆ ನಡೆಸಿದೆ.
ಪ್ರಕರಣ ಸಂಬಂಧ ದೆಹಲಿಯ 8 ಸ್ಥಳಗಳಲ್ಲಿ ಹಾಗೂ ಮುಂಬೈ ನ 2 ಕಡೆ ತನಿಖಾ ದಳ ಶೋಧ ಕಾರ್ಯಾಚರಣೆ ನಡೆಸಿದೆ.
ಕ್ರಿಮಿನಲ್ ಅಪರಾಧದಲ್ಲಿ ಬಾಗಿಯಾಗಿರುವ ಆರೋಪಿಗಳು ಯುಕೋ ಬ್ಯಾಂಕ್ ಗೆ ಸಾಲಗಳ ಮರುಪಾವತಿ ಸಂಬಂಧ ರೂ. 621 ಕೋಟಿ ರೂ. (ಅಂದಾಜು) ವಂಚನೆ ಮಾಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಎರಾ ಇಂಜಿನಿಯರಿಂಗ್ ಇನ್ಫ್ರಾ ಇಂಡಿಯಾ ಲಿಮಿಟೆಡ್ (ಎಂ / ಎಸ್ ಇಇಐಎಲ್),, ಅದರ ಸಿಎಂಡಿ ಹೇಮ್ ಸಿಂಗ್ ಭರನಾ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ಸ್ - ಪಂಕಜ್ ಜೈನ್ ಮತ್ತು ವಂದನಾ ಶರ್ದಾ, ಎಂ / ಎಸ್ ಅಲ್ಟಿಯಸ್ ಫಿನ್ಸೆರ್ವ್ ಪ್ರೈವೇಟ್ನ ಪವನ್ ಬನ್ಸಾಲ್. ಲಿಮಿಟೆಡ್ ಮತ್ತು ಇತರರನ್ನು ಸಿಬಿಐ ತನಿಖೆ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com