ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದೆ, ತಾತ್ಕಾಲಿಕ ಕೊರತೆ ನಿವಾರಣೆಗೆ ತ್ವರಿತ ಕ್ರಮ: ಅರುಣ್ ಜೇಟ್ಲಿ

ನೋಟು ನಿಷೇಧದ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಕೊರತೆ ಎದುರಾಗಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ನೋಟು ನಿಷೇಧದ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಕೊರತೆ ಎದುರಾಗಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿನ ಎಟಿಎಂಗಳಲ್ಲಿ ಹಣ ಇಲ್ಲ ಎಂಬ ಬೋರ್ಡ್ ಗಳನ್ನು ತೂಗು ಹಾಕಲಾಗಿದೆ. 
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದ್ದು ಇನ್ನು ತಾತ್ಕಾಲಿಕ ನಗದು ಕೊರತೆ ನಿವಾರಣೆಗೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
ಗುಜರಾತ್, ಪೂರ್ವ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿರುವುದಾಗಿ ವರದಿಯಾಗಿತ್ತು. ದೇಶದಲ್ಲಿ ಕರೆನ್ಸಿ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಜೇಟ್ಲಿ ಟ್ವೀಟ್ ಮಾಡಿದ್ದಾರೆ. 
ಚಲಾವಣೆಯಲ್ಲಿರುವ ಸಾಕಷ್ಟು ಕರೆನ್ಸಿ ಬ್ಯಾಂಕ್ ಗಳಲ್ಲಿ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಹಠಾತ್ ಮತ್ತು ಅಸಾಮಾನ್ಯ ಹೆಚ್ಚಳ(ಬೇಡಿಕೆ) ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ನಗದು ಕೊರತೆ ಎದುರಾಗಿದ್ದು ತಾತ್ಕಾಲಿಕ ಕೊರತೆಯನ್ನು ತ್ವರಿತವಾಗಿ ನಿಭಾಯಿಸಲಾಗುವುದು ಎಂದು ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com