ಗ್ರಾಹಕರಿಗೆ ಹೊರೆ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ ಸಾಧ್ಯತೆ?

ಶೀಘ್ರ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇದ್ದು, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶೀಘ್ರ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇದ್ದು, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಬ್ಯಾಂಕ್ ಗಳು ಗ್ರಾಹಕರಿಗೆ ನೀಡುತ್ತಿರುವ ಉಚಿತ ಸೇವೆಗಳ ಸಂಬಂಧ 5 ವರ್ಷಗಳ ಸೇವಾ ತೆರಿಗೆ ಪಾವತಿ ಮಾಡುವಂತೆ ಕೇಂದ್ರ ತೆರಿಗೆ ಇಲಾಖೆ ನೋಟಿಸ್ ನೀಡಿ ಬ್ಯಾಂಕಿಂಗ್ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದು. ಈ ಸಂಬಂಧ ಸುಮಾರು 6000 ಕೋಟಿ ಸೇವಾ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ನೀಡಿದೆ ಎನ್ನಲಾಗಿದೆ. ಗ್ರಾಹಕರಿಗೆ ನೀಡುತ್ತಿರುವ ಉಚಿತ ಸೇವೆಗಳ ಮೇಲಿನ ತೆರಿಗೆ ಪಾವತಿ ಮಾಡುವಂತೆ ಕೇಂದ್ರ ತೆರಿಗೆ ಇಲಾಖೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿ ಎಫ್ ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಇದೇ ಕಾರಣ್ಕಕೆ ಪ್ರಮುಖ ಬ್ಯಾಂಕ್ ಗಳು ತಮ್ಮ ಮೇಲಿನ ತೆರಿಗೆ ಹೊರೆ ತಪ್ಪಿಸಿಕೊಳ್ಳಲು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದು, ಇಷ್ಟು ದಿನ ಉಚಿತವಾಗಿದ್ದ ಸೇವೆಗಳ ಮೇಲೆ ಶುಲ್ಕ ವಿಧಿಸುವ ಮೂಲಕ ತೆರಿಗೆ ಹೊರೆ ತಪ್ಪಿಸಿಕೊಳ್ಳಲು ಮುಂದಾಗಿವೆ. 
ಸಾಮಾನ್ಯವಾಗಿ ಚೆಕ್ ಬುಕ್, ಎಟಿಎಂ ವಿತ್ ಡ್ರಾ, ಹಾಗೂ ಕಾರ್ಡ್ ಗಳ ಇನ್ನಿತ್ತರ ಸೇವೆಗಳಿಗೆ ಬ್ಯಾಂಕ್ ಗಳು ಶುಲ್ಕ ವಿಧಿಸವುದು ಸಾಮಾನ್ಯ. ಆದರೆ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಉಳ್ಳ ಗ್ರಾಹಕರಿಗೆ ಈ ಸೇವೆಗಳನ್ನು ಉಚಿತವಾಗಿ ಸೇವೆಗಳನ್ನು ನೀಡಲಾಗುತ್ತದೆ. ಆದರೆ ಮಿನಿಮಮ್ ಬ್ಯಾಲೆನ್ಸ್ ಉಳಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಈ ಸೇವೆಗಳು ತೆರಿಗೆ ವ್ಯಾಪ್ತಿಗೆ ಬರುವ ಹಿನ್ನಲೆಯಲ್ಲಿ ಈ ಮೇಲಿನ ಸೇವೆಗಳನ್ನು ಪರಿಗಣಸಲಾದ ಸೇವೆಗಳೆಂದು ತೆರಿಗೆ ಇಲಾಖೆ ಗುರುತಿಸಿ ತೆರಿಗೆ ವಿಧಿಸಲು ಅವಕಾಶವಿರುವ ಹಿನ್ನಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆ  ಬ್ಯಾಂಕ್ ಗಳಿಗೆ ಷೋಕಸ್ ನೋಟಿಸ್ ನೀಡಿದ್ದು ತೆರಿಗೆ ಕಟ್ಟುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com