ರಿಲಯನ್ಸ್ ಜಿಯೊದಲ್ಲಿ ಈ ವರ್ಷ 80 ಸಾವಿರ ಮಂದಿಗೆ ಉದ್ಯೋಗಾವಕಾಶ

ಟೆಲಿಕಾಂ ವಲಯವನ್ನು ವಿಸ್ತರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೊ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಟೆಲಿಕಾಂ ವಲಯವನ್ನು ವಿಸ್ತರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೊ 75 ರಿಂದ 80 ಸಾವಿರದವರೆಗೆ ಜನರನ್ನು ನೇಮಕಾತಿ ಮಾಡಲಿದೆ.

ಪ್ರಸ್ತುತ ರಿಲಯನ್ಸ್ ನಲ್ಲಿ 1,57,000 ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ 10 ಲಕ್ಷ ರಿಟೈಲರ್ ಗಳಿದ್ದು ಪ್ರತಿಯೊಬ್ಬರೂ ಇಬ್ಬರು ಅಥವಾ ಮೂವರು ಉದ್ಯೋಗಿಗಳ ಮೇಲೆ ಪರಿಮಾಮ ಬೀರುತ್ತಾರೆ.

ಹಲವು ಹೊಸ ಉದ್ಯಮಗಳು ನಮಗಾಗಿ ತೆರೆದಿರುತ್ತವೆ. ಜಿಯೊ ಪೇಮೆಂಟ್ ಬ್ಯಾಂಕ್ ಕೂಡ ಭೌಗೋಳಿಕವಾಗಿ ವಿತರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಜಿಯೊ ಜೊತೆ ಇನ್ನಷ್ಟು ಮಂದಿ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ರಿಲಯನ್ಸ್ ಜಿಯೊದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೊಗ್ ತಿಳಿಸಿದ್ದಾರೆ.

ರಿಲಯನ್ಸ್ ಜಿಯೊದ ಶೇಕಡಾ 32ರಷ್ಟು ಮಾರಾಟ ಮತ್ತು ತಾಂತ್ರಿಕ ಪ್ರದೇಶಗಳು ನಿರ್ಮಾಣ ಕೇಂದ್ರಗಳಿಗೆ ಸಂಬಂಧಿಸಿದ್ದಾಗಿದೆ. ಅದನ್ನು ಕೇಂದ್ರ ಮಟ್ಟದಲ್ಲಿ ತೆಗೆದುಕೊಳ್ಳುವುದಾದರೆ ಅದು ಕೇವಲ ಶೇಕಡಾ 2ರಷ್ಟಿದೆ. ಸರಾಸರಿ ತೆಗೆದುಕೊಂಡರೆ ಅದು ಶೇಕಡಾ 18ರಷ್ಟಾಗುತ್ತದೆ ಎಂದು ಹೇಳಿದರು.

ರಿಲಯನ್ಸ್ ಜಿಯೊ ಕಂಪೆನಿ ದೇಶಾದ್ಯಂತ 6,000 ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳ ಜೊತೆ ಸಹಯೋಗವನ್ನು ಹೊಂದಿದೆ. ಈ ಸಂಸ್ಥೆಗಳಲ್ಲಿ ಕೆಲವು ಕೋರ್ಸ್ ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದರಲ್ಲಿ ತೇರ್ಗಡೆ ಹೊಂದಿದವರನ್ನು ಕಂಪೆನಿ ನೇಮಕಾತಿ ಮಾಡಿಕೊಳ್ಳುತ್ತದೆ.

ಕಂಪೆನಿಗೆ ಅಭ್ಯರ್ಥಿಗಳನ್ನು ಉಲ್ಲೇಖದ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಲಾಗುವುದು ಎಂದು ಸಂಜಯ್ ಜೊಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com