ಫೇಸ್ ಬುಕ್ ಮಾತ್ರವಲ್ಲ, ಟ್ವಿಟ್ಟರ್ ಕೂಡ ಕೇಂಬ್ರಿಡ್ಜ್ ಅನಾಲಿಟಿಕಾಗೆ ಮಾಹಿತಿ ಮಾರಾಟ ಮಾಡಿದೆ: ವರದಿ

ಫೇಸ್ ಬುಕ್ ನಲ್ಲಿ ದಾಖಲೆಗಳ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಇದೀಗ ಟ್ವಿಟ್ಟರ್ ಕೂಡ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಂಡನ್: ಫೇಸ್ ಬುಕ್ ನಲ್ಲಿ ದಾಖಲೆಗಳ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಇದೀಗ ಟ್ವಿಟ್ಟರ್ ಕೂಡ ಬಳಕೆದಾರರ ದಾಖಲೆಗಳನ್ನು ಕೇಂಬ್ರಿಜ್ಡ್ ಅನಾಲಿಟಿಕಾ ಸಂಶೋಧಕರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇಂಬ್ರಿಡ್ಜ್ ಅನಾಲಿಟಿಕಾ ಸುಮಾರು 87 ದಶಲಕ್ಷ ಫೇಸ್ ಬುಕ್ ಬಳಕೆದಾರರ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ಗಮನಕ್ಕೆ ಬಾರದೆ ಬಳಕೆ ಮಾಡಿತ್ತು ಎಂದು ಸಂಡೆ ಟೆಲಿಗ್ರಾಫ್ ವರದಿ ಮಾಡಿದೆ.

ವರದಿಯೊಂದರ ಪ್ರಕಾರ, ಟ್ವಿಟ್ಟರ್ ಸಾರ್ವಜನಿಕ ದಾಖಲೆಗಳನ್ನು 2015ರಲ್ಲಿ ಗ್ಲೋಬಲ್ ಸೈನ್ಸ್ ರಿಸರ್ಚ್ ಎಂಬ ಕಂಪೆನಿಯ ಮಾಲಿಕ ಮತ್ತು ಅಂದಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ಸಂಶೋಧಕ ಅಲೆಕ್ಸಾಂಡರ್ ಕೊಗನ್ ಎಂಬವರಿಗೆ ಮಾರಾಟ ಮಾಡಿತ್ತು ಎಂದು ತಿಳಿದುಬಂದಿದೆ.

2015ರಲ್ಲಿ ಬಳಕೆದಾರರ ದಾಖಲೆಗಳನ್ನು ಪಡೆಯಲು ಜಿಎಸ್ಆರ್ ಗೆ ಒಂದು ದಿನ ಹಣ ನೀಡಲಾಗಿತ್ತು. ಅದು 2014ರಿಂದ ಏಪ್ರಿಲ್ 2015ರ ಮಧ್ಯೆ ಬಳಕೆದಾರರ ಟ್ವೀಟ್ ಗಳನ್ನು ಆಧರಿಸಿ ಪ್ರಭಾವ ಮಾಡಲು ಬಳಸಲಾಗಿದೆ. ಆದರೆ ಖಾಸಗಿ ಮಾಹಿತಿಗಳು ಸಿಗುವಂತೆ ಮಾಡಿರಲಿಲ್ಲ ಎಂದು ಟ್ವಿಟ್ಟರ್ ಹೇಳಿದೆ.

ಬ್ರಾಂಡ್ ವರದಿಗಳನ್ನು ಸೃಷ್ಟಿಸಿ ಬಳಕೆ ಮಾಡಲು ಟ್ವಿಟ್ಟರ್ ದಾಖಲೆಗಳನ್ನು ಬಳಸಲಾಗಿದೆ ಮತ್ತು ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಕೊಗನ್ ವರದಿ ಹೇಳುತ್ತದೆ.
ಆದರೆ ತೀರಾ ಇತ್ತೀಚಿನ ಆತಂಕದ ವಿಷಯವೆಂದರೆ ಜಿಎಸ್ಆರ್ ನ್ನು ಫೇಸ್ ಬುಕ್ ಮತ್ತು ಟ್ವಿಟ್ಟರ್ ದಾಖಲೆಗಳಿಗೆ ಹೋಲಿಸಲಾಗುತ್ತದೆ. ಆದರೂ ಇದು ದಾಖಲೆಗಳ ಸಂಗ್ರಹ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಾಂತ್ರಿಕ ಪೋರ್ಟಲ್ ಎಂಗೆಜೆಟ್ ಹೇಳುತ್ತದೆ.

ಬಳಕೆದಾರರ ಸೋರಿಕೆಯಾದ ದಾಖಲೆಗಳನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಅಸಮರ್ಪಕವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ರ್ಯಾಲಿಯಲ್ಲಿ ಬಳಕೆ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಆದರೆ ಟ್ವಿಟ್ಟರ್, ಜಿಎಸ್ಆರ್ ಮತ್ತು ಕೇಂಬ್ರಿಡ್ಜ್ ಅನಾಲಿಟಿಕಾ ದಾಖಲೆಗಳನ್ನು ಖರೀದಿಸುವುದನ್ನು ಅಥವಾ ಜಾಹಿರಾತು ನೀಡುವುದನ್ನು ತನ್ನ ವೆಬ್ ಸೈಟ್ ನಲ್ಲಿರುವುದನ್ನು ಮತ್ತು ಯಾವುದೇ ಖಾಸಗಿ ದಾಖಲೆಗಳು ಸೋರಿಕೆಯಾಗಿಲ್ಲ ಎಂದು ಹೇಳಿದೆ.
ಈ ಮಧ್ಯೆ ಟ್ವಿಟ್ಟರ್ ಗೆ 2018ರ ಮೊದಲ ತ್ರೈಮಾಸಿಕದಲ್ಲಿ 665 ಮಿಲಿಯನ್ ಡಾಲರ್ ಆದಾಯ ಬಂದಿದ್ದು ಅದು ಕಳೆದ ವರ್ಷದಿಂದ ಶೇಕಡಾ 21ರಷ್ಟು ಹೆಚ್ಚಾಗಿದೆ. ಇಂದು ಟ್ವಿಟ್ಟರ್ ನಲ್ಲಿ 336 ದಶಲಕ್ಷ ಬಳಕೆದಾರರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com