ಕಳೆದ ವರ್ಷ 30,659 ಕೋಟಿ ರೂಪಾಯಿ ಲಾಭಾಂಶವನ್ನು ಆರ್ ಬಿಐ ಸರ್ಕಾರಕ್ಕೆ ವರ್ಗಾವಣೆ ಮಾಡಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನೋಟು ನಿಷೇಧದಿಂದ ಹೊಸ ನೋಟುಗಳನ್ನು ಮುದ್ರಿಸಬೇಕಾದ ಹಿನ್ನೆಲೆಯಲ್ಲಿ 2017 ರಲ್ಲಿ ಆರ್ ಬಿಐ ಸರ್ಕಾರಕ್ಕೆ ನೀಡುತ್ತಿದ್ದ ಲಾಭಾಂಶದ ಮೊತ್ತ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.