ರೂಪಾಯಿ ಮೌಲ್ಯ ಮತ್ತೆ ಕುಸಿತ: ಪ್ರತಿ ಡಾಲರ್ ಎದುರು 70 ರೂಪಾಯಿ 95 ಪೈಸೆ

ವಾರದ ಕೊನೆಯ ದಿನದ ವಹಿವಾಟಿನ ಶುಕ್ರವಾರ ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವಾರದ ಕೊನೆಯ ದಿನದ ವಹಿವಾಟಿನ ಶುಕ್ರವಾರ ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ದರ ದಾಖಲೆಯ 26 ಪೈಸೆಯಷ್ಟು ಕುಸಿದಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 70.95 ಕ್ಕೆ ಇಳಿದಿದೆ.

ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್ ಚ್ಜ಼ೆಂಜ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ಅಂತಿಮವಾಗಿ ಭಾರತೀಯ ರೂಪಾಯಿ ದಾಖಲೆಯ್ ಮಟ್ಟದ ಕುಸಿತದೊಡನೆ 70 ರೂಪಾಯಿ 95ಕ್ಕೆ ತಲುಪಿದೆ.

ವಿದೇಶಿ ವಿನಿಮಯ ಡೀಲರ್ ಗಳು, ಆಮದುದಾರರ ಖರೀದಿ, ಕಚ್ಚಾ ತೈಲ ಬೆಲೆ, ಮತ್ತು ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ದೇಶೀಯ ಹಣದ ಮಾರುಕಟ್ಟೆಯಲ್ಲಿ ಏರಿಳತವಾಗಿದೆ. ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲಿ ವಿದೇಶೀ ಕರೆನ್ಸಿಗಳ ನಡುವೆ ಡಾಲರ್ ನ ಮೌಲ್ಯ ಬಲವರ್ಧನೆಯು ಸಹ ರೂಪಾಯಿಯ ಮೇಲೆ ಒತ್ತಡ ಹಾಕುತ್ತಿದೆ.

ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಇಳಿಕೆಯಾಗಿ 70 ರೂಪಾಯಿ 74 ಪೈಸೆಯಷ್ಟಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಂದು ಪ್ರತಿ ಬ್ಯಾರಲ್ ಗೆ 78 ಅಮೆರಿಕನ್ ಡಾಲರ್ ಆಗಿತ್ತು.

ಈ ಮಧ್ಯೆ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ 79 ಅಂಕಗಳಷ್ಟು ಇಳಿಕೆ ಕಂಡು 38,612ರಲ್ಲಿ ವಹಿವಾಟು ಆರಂಭಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com