ಕಳೆದ 20 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 13 ರೂ. ಇಳಿಕೆ

ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ 13 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ 13 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ಶುಕ್ರವಾರ ಮತ್ತೆ ತೈಲೋತ್ಪನ್ನಗಳ ದರಗಳು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 40 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 41 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಆ ಮೂಲಕ ಕಳೆದ 20 ದಿನಗಳಿಂದ ಇಲ್ಲಿಯವರೆಗೂ ಪೆಟ್ರೋಲ್ ದರದಲ್ಲಿ 13 ರೂ ಇಳಿಕೆಯಾದಂತಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು 85 ರು. ತಲುಪಿದ್ದ ಪೆಟ್ರೋಲ್ ದರ ಶುಕ್ರವಾರ 40 ಪೈಸೆ ಕಡಿಮೆಯಾಗುವ ಮೂಲಕ 71.32ಕ್ಕೆ ಇಳಿದಿದ್ದರೆ, ಡೀಸೆಲ್ ಬೆಲೆಯೂ 41 ಪೈಸೆ ಕುಸಿತಗೊಂಡು 65.55ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಇಂಧನ ದರ?
ಸಿಲಿಕಾನ್ ಸಿಟಿಯಲ್ಲೂ ಗಗನಕ್ಕೇರಿದ್ದ ಇಂಧನ ದರ ಈಗ ಕಡಿಮೆಯಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ. ಪ್ರತಿ ಲೀಟರ್ ಪೆಟ್ರೋಲ್ 71.46 ರು. (40 ಪೈಸೆ ಇಳಿಕೆ ನಂತರ) ಮತ್ತು ಡೀಸೆಲ್ 65.88 ರು.ಗೆ (41 ಪೈಸೆ ಇಳಿಕೆ ನಂತರ) ಮಾರಾಟವಾಗುತ್ತಿದೆ.
ಇನ್ನೂ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಕ್ರಮವಾಗಿ 76.50 ರು., 68.59 ರು.ಗೆ ಮಾರಾಟವಾಗುತ್ತಿದ್ದರೆ, ಇತರ ಮೆಟ್ರೊ ಸಿಟಿಗಳಾದ ಚೆನ್ನೈ ಮತ್ತು ಕೋಲ್ಕತದಲ್ಲಿ ಪೆಟ್ರೋಲ್ ದರ ಕ್ರಮವಾಗಿ 73.57 ರು. ಮತ್ತು 72.97 ರು. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿರುವುದರ ಪರಿಣಾಮ ದೇಶದೆಲ್ಲೆಡೆ ಇಂಧನ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೂ ಕಚ್ಚಾ ತೈಲ ಬೆಲೆ ಶೇ.30ರಷ್ಟು ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com