ಫೇಸ್ ಬುಕ್
ವಾಣಿಜ್ಯ
ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ!
ಡಾಟಾವನ್ನು ಮಾಹಿತಿ ನೀಡದೇ ಮಾರಾಟ ಮಾಡಿರುವುದಕ್ಕಾಗಿ ಇಟಾಲಿಯ ನಿಯಂತ್ರಕರು ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ ವಿಧಿಸಿದ್ದಾರೆ.
ಲಂಡನ್: ಡಾಟಾವನ್ನು ಮಾಹಿತಿ ನೀಡದೇ ಮಾರಾಟ ಮಾಡಿರುವುದಕ್ಕಾಗಿ ಇಟಾಲಿಯ ನಿಯಂತ್ರಕರು ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ ವಿಧಿಸಿದ್ದಾರೆ.
ಫೇಸ್ ಬುಕ್ ಜನತೆಯ ದಾರಿ ತಪ್ಪಿಸಿ, ಪಡೆಯುವ ಡಾಟಾವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ ಎಂಬುದನ್ನು ತಿಳಿಸದೇ ಸೈನ್ ಅಪ್ ಮಾಡಲು ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲದೇ ಸಂಸ್ಥೆ ಡಾಟಾ ಹಂಚಿಕೊಳ್ಳುವುದನ್ನು ತಡೆಗಟ್ಟಲು ಗ್ರಾಹಕರಿಗೆ ಅಡ್ಡಿ ಪಡಿಸುತ್ತದೆ, ಈ ಹಿನೆಲೆಯಲ್ಲಿ ಫೇಸ್ ಬುಕ್ ಗೆ ಒಟ್ಟಾರೆ 10 ಮಿಲಿಯನ್ ಯುರೋ ದಂಡ ವಿಧಿಸಲಾಗುತ್ತದೆ ಎಂದು ಇಟಾಲಿಯ ಸಂಸ್ಥೆ ತಿಳಿಸಿದೆ.
ದಂಡ ವಿಧಿಸುವುದರ ಜೊತೆಗೆ ಫೇಸ್ ಬುಕ್ ಆಪ್ ನಲ್ಲಿ ಗ್ರಾಹಕರಿಗೆ ಕ್ಷಮೆ ಕೋರಬೇಕೆಂದೂ ಇಟಾಲಿ ನಿಯಂತ್ರಕ ಸಂಸ್ಥೆ ಫೇಸ್ ಬುಕ್ ಗೆ ಸೂಚನೆ ನೀಡಿದೆ. ಇಟಾಲಿ ನಿಯಂತ್ರಕ ಸಂಸ್ಥೆಯ ಸೂಚನೆಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್, ಸಂಸ್ಥೆಯ ನಿರ್ಧಾರವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ