ಆರ್ ಬಿಐ
ಆರ್ ಬಿಐ

ಆರ್ ಬಿಐ ಮೀಸಲು ಹಣವನ್ನು ಅರ್ಥ ವ್ಯವಸ್ಥೆ ಸರಿಪಡಿಸಲು ಬಳಸಬೇಕು: ಅರವಿಂದ್ ಸುಬ್ರಹ್ಮಣಿಯನ್

ಆರ್ ಬಿಐ ಮೀಸಲಿರುವುದು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿಯೇ ಹೊರತು ಆರ್ಥಿಕ ಕೊರತೆ ನೀಗಿಸಲು ಅಥವಾ ಸರ್ಕಾರಿ ವೆಚ್ಚಕ್ಕಾಗಿ ಅಲ್ಲ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್
ಬೆಂಗಳೂರು: ಆರ್ ಬಿಐ ಮೀಸಲಿರುವುದು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿಯೇ ಹೊರತು ಆರ್ಥಿಕ ಕೊರತೆ ನೀಗಿಸಲು ಅಥವಾ ಸರ್ಕಾರಿ ವೆಚ್ಚಕ್ಕಾಗಿ ಅಲ್ಲ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. 
ಮೀಸಲು ಹಣವನ್ನು ದೀರ್ಘಾವಧಿಯ ಹೂಡಿಕೆಗಾಗಿ ಬಳಕೆ ಮಾಡಬೇಕೆ ಹೊರತು ಈಗಿನ ಅಗತ್ಯತೆಗಳಿಗೆ ಬಳಕೆ ಮಾಡಬಾರದು. ಒಂದು ವೇಳೆ ಮೀಸಲು ಹಣವನ್ನು ಆರ್ಥಿಕ ಕೊರತೆಗಾಗಿ ಬಳಕೆ ಮಾಡಿದರೆ ಅದು ಆರ್ ಬಿಐ ನ ಮೇಲೆ ಪ್ರಹಾರವಾದಂತಾಗಲಿದೆ. ಒಂದು ವೇಳೆ ಈ ರೀತಿ ನಡೆದ ಇದರಿಂದಾಗಿ ನನಗೆ ತೀವ್ರವಾಗಿ ಅಸಮಾಧಾನ ಉಂಟಾಗಲಿದೆ ಎಂದು ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದಾರೆ.
ಆರ್ ಬಿ ಐ ಬಳಿ ಬೃಹತ್ ಪ್ರಮಾಣದಲ್ಲಿ ಬಂಡವಾಳವಿದ್ದರೆ ಅದನ್ನು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿ ಮೀಸಲಿಡಬೇಕು, ಅದನ್ನೂ ಸಹಕಾರದೊಂದಿಗೆ ಮಾಟಬೇಕೇ ಹೊರತು , ಪ್ರತಿಕೂಲವಾಗಿ ಅಲ್ಲ ಎಂದು ಅರವಿಂದ್ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ-ಆರ್ ಬಿಐ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವುದಕ್ಕೆ ಸರ್ಕಾರ ಸಮಿತಿ ರಚನೆ ಮಾಡಬೇಕಿತ್ತು ಎಂದೂ ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com