ಮಹಿಳೆಯರು ಪುರುಷರ ಸಮನಾಗಿ ಸಂಪಾದಿಸಲು ಬೇಕು ಇನ್ನೂ 2 ಶತಮಾನ!

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮನಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಹಣ ಸಂಪಾದನೆಯ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ಮಹಿಳೆಯರು ಪುರುಷರ ಸಮನಾಗಿ ಸಂಪಾದಿಸಲು ಬೇಕು ಇನ್ನೂ 2 ಶತಮಾನ!
ಮಹಿಳೆಯರು ಪುರುಷರ ಸಮನಾಗಿ ಸಂಪಾದಿಸಲು ಬೇಕು ಇನ್ನೂ 2 ಶತಮಾನ!
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮನಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಹಣ ಸಂಪಾದನೆಯ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸವಿದೆ. 
ಈಗಲೂ ಹಲವು ರೀತಿಯಲ್ಲಿ ವಿಶ್ವಾದ್ಯಂತ ಲಿಂಗ ತಾರತಮ್ಯ ಅಸ್ತಿತ್ವದಲ್ಲಿದ್ದು, ಮಹಿಳೆಯರ ದಿನ ನಿತ್ಯದ ಬದುಕಿನಲ್ಲಿ ಇದನ್ನು ಗಮನಿಸಬಹುದಾಗಿದೆ. ಹಾಗಾದರೆ  ಮಹಿಳೆಯರು ಪುರುಷರಿಗೆ ಸಮನಾಗಿ ಸಂಪಾದನೆ ಮಾಡಲು ತೆಗೆದುಕೊಳ್ಳುವ ಅವಧಿ ಎಷ್ಟು ಎಂಬ ಪ್ರಶ್ನೆಗೆ ವಿಶ್ವಸಂಸ್ಥೆ ಮಹಿಳಾ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿರುವ ಅನ್ನಾ-ಕರಿನ್ ಜಾಟ್ಫೋರ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇನ್ನೂ 202 ವರ್ಷಗಳು ಬೇಕೆಂದು ಅಂದಾಜಿಸಿದ್ದಾರೆ. 
ಸಮನಾದ ವೇತನಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಕೆಲಸ ಮಾಡುವ ಪ್ರದೇಶದಲ್ಲಿ ಕಾನೂನು ಭದ್ರತೆ, ಗರ್ಭಿಣಿಯರಾದಾಗ ಉದ್ಯೋಗ ಭದ್ರತೆಯನ್ನು ಒದಗಿಸುವ ಮೂಲಕ ಸರ್ಕಾರಗಳೂ ಸಹ ಮಹಿಳೆಯರು ಪುರುಷರಿಗೆ ಸಮನಾಗಿ ಸಂಪಾದನೆ ಮಾಡುವುದಕ್ಕೆ ಸಹಕರಿಸಬಹುದು ಎಂದು  ಅನ್ನಾ-ಕರಿನ್ ಜಾಟ್ಫೋರ್ಸ್ ಹೇಳಿದ್ದಾರೆ. 
ಕಳೆದ ವರ್ಷದ ಆರ್ಥಿಕವಾಗಿ ತೊಡಗಿಸಿಕೊಳ್ಳುವುದು ಮತ್ತು ಅವಕಾಶಗಳಿಗೆ ಸಂಬಂಧಿಸಿದಂತೆ ಬಂದಿದ್ದ ವರದಿಗೂ ಈ ವರ್ಷ ಬಂದಿರುವ ವರದಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಪೈಕಿ ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ ದೇಶಗಳು ಅತ್ಯಂತ ಕಡಿಮೆ ಸಾಧನೆ ಮಾಡಿವೆ. ಜಾಗತಿಕವಾಗಿ ಕೇವಲ ಶೇ.34 ರಷ್ಟೇ ಮಹಿಳೆಯರಿದ್ದಾರೆ, ಜಾಗತಿಕ ವೇತನ ಅಂತರ ಶೇ.63 ರಷ್ಟು ಹೋಗಲಾಡಿಸಲಾಗಿದ್ದು, ಮಹಿಳೆಯರು ಪುರುಷರ ಸಮನಾಗಿ ಸಂಪಾದಿಸಲು ಬೇಕು ಇನ್ನೂ 2 ಶತಮಾನವಾದರೂ ಬೇಕು ಎಂದು ವಿಶ್ವಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. 
ಡಬ್ಲ್ಯೂ ಇಎಫ್ ಹಾಗೂ ಲಿಂಕ್ಡ್ ಇನ್ ನಲ್ಲಿ ನಡೆಸಿರುವ ವಿಶ್ಲೇಷಣೆಯ ಪ್ರಕಾರ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ಬೇರೆ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚಿದೆ.  ಕೃತಕ ಬುದ್ಧಿ ಮತ್ತೆ ಕ್ಷೇತ್ರದಲ್ಲಿ ಹೆಚ್ಚು ತಿಳಿದಿರುವ ಮಹಿಳೆಯರು ಡಾಟಾ ಅನಾಲಿಸ್ಟ್ ಹಾಗೂ ಇನ್ಫಾರ್ಮೇಷನ್ ಮ್ಯಾನೇಜರ್ ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಇದೇ ವಿಭಾಗದಲ್ಲಿನ ಪುರುಷರು ಉನ್ನತ ಸ್ಥಾನ ಪಡೆದು ಇಂಜಿನಿಯರಿಂಗ್ ಹೆಡ್ ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗುತ್ತಾರೆ ಎಂದು ವರದಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com