ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 690 ಅಂಕ ಕುಸಿತ 10,800ಕ್ಕೂ ಕೆಳಗಿಳಿದ ನಿಫ್ಟಿ

ರಿಯಾಲ್ಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಗಳ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕಗಳಲ್ಲಿ ಭಾರೀ ಇಳಿಕೆಯಾಗಿದೆ.
ಮುಂಬೈ ಸ್ಟಾಕ್ ಮಾರ್ಕೆಟ್
ಮುಂಬೈ ಸ್ಟಾಕ್ ಮಾರ್ಕೆಟ್
ಮುಂಬೈ: ರಿಯಾಲ್ಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಗಳ ಕ್ಷೇತ್ರದಲ್ಲಿ  ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕಗಳಲ್ಲಿ ಭಾರೀ ಇಳಿಕೆಯಾಗಿದೆ.
ಬಿಎಸ್ಇ ಸೆನ್ಸೆಕ್ಸ್ 689.60 ಪಾಯಿಂಟ್ ಅಥವಾ 1.89 ಶೇ. ಕುಸಿದು 35,742.07 ಕ್ಕೆ ಇಳಿದಿದೆ. ಇದೇ ವೇಳೆ ನಿಫ್ಟಿ ಸೂಚ್ಯಾಂಕ ಸಹ 197.70 ಪಾಯಿಂಟ್ ಅಥವಾ  1.81 ಶೇ ಕುಸಿದಿದ್ದು 10,754 ಕ್ಕೆ ತಲುಪಿದೆ.
ಮೂವತ್ತು ಸಂಸ್ಥೆಗಳ ಷೇರು ಸೂಚ್ಯಾಂಕವು ವಾರದಲ್ಲಿ 527.93 ಪಾಯಿಂಟ್ ಗಳನ್ನು ಕಳೆದುಕೊಂಡಿದೆ.ನಿಫ್ಟಿಯು 134 ಪಾಯಿಂಟ್ ಕುಸಿದಿದೆ.
ರಿಲಯನ್ಸ್, ಇನ್ಫೋಸಿಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಗೆ ಸೇರಿದ್ದ ಎರಡು ಸಂಸ್ಥೆಗಳು,  ಐಟಿಸಿ, ಮಾರುತಿ, ಎಲ್ ಆಂಡ್ ಟಿ, ಎಚ್.ಯು.ಎಲ್. , ಆಕ್ಸಿಸ್ ಬ್ಯಾಂಕ್, ವಿಪ್ರೋ ಮತ್ತು ಇಂಡಸ್ ಲ್ಯಾಂಡ್ ಬ್ಯಾಂಕ್ ಗಳು ಶೇ.4ರಷ್ಟು ನಷ್ಟ ಅನುಭವಿಸಿದೆ. ಇನ್ನೊಂದೆಡೆ ಮತ್ತೊಂದೆಡೆ, ಎನ್ಟಿಪಿಸಿ, ಪವರ್ಗ್ರಿಡ್ ಮತ್ತು ಕೋಲ್ ಇಂಡಿಯಾ ಸಂಸ್ಥೆಗಳು ಸೆನ್ಸೆಕ್ಸ್ ನಲ್ಲಿ ಕೇವಲ ಶೇ. 1ರಷ್ಟು ಏರಿಕೆ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com