ಇ-ಕಾಮರ್ಸ್ ಗೆ ಕೇಂದ್ರದ ಹೊಸ ನೀತಿ: ಅಮೇಜಾನ್, ಫ್ಲಿಪ್ ಕಾರ್ಟ್ ಗಳಿಗೆ ಫಜೀತಿ!

ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಕಂಟಕವಾಗಿ ಪರಿಣಮಿಸಿರುವ ವಿದೇಶಿ ಹೂಡಿಕೆಯಿರುವ ಇ-ಕಾಮರ್ಸ್ ಗಳ ಕೆಲವು ಮಾರುಕಟ್ಟೆ ತಂತ್ರಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕುವುದಕ್ಕೆ ಮುಂದಾಗಿದೆ.
ಇ-ಕಾಮರ್ಸ್ ಗೆ ಕೇಂದ್ರದ ಹೊಸ ನೀತಿ: ಅಮೇಜಾನ್, ಫ್ಲಿಪ್ ಕಾರ್ಟ್ ಗಳಿಗೆ ಫಜೀತಿ!
ಇ-ಕಾಮರ್ಸ್ ಗೆ ಕೇಂದ್ರದ ಹೊಸ ನೀತಿ: ಅಮೇಜಾನ್, ಫ್ಲಿಪ್ ಕಾರ್ಟ್ ಗಳಿಗೆ ಫಜೀತಿ!
ನವದೆಹಲಿ: ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಕಂಟಕವಾಗಿ ಪರಿಣಮಿಸಿರುವ ವಿದೇಶಿ ಹೂಡಿಕೆಯಿರುವ ಇ-ಕಾಮರ್ಸ್ ಗಳ ಕೆಲವು ಮಾರುಕಟ್ಟೆ ತಂತ್ರಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕುವುದಕ್ಕೆ ಮುಂದಾಗಿದೆ. 
ಫ್ಲಿಪ್ ಕಾರ್ಟ್, ಅಮೇಜಾನ್ ನಂತಹ ಇ-ಕಾಮರ್ಸ್ ಸಂಸ್ಥೆಗಳು ಹಲವು ಉತ್ಪನ್ನಗಳನ್ನು ತಯಾರಕರ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಎಕ್ಸ್ ಕ್ಲ್ಯೂಸಿವ್ ಆಗಿ ಮಾರಾಟ ಮಾಡುತ್ತಿದ್ದವು. ಇದರಿಂದಾಗಿ ಅಸಮತೋಲನ ಉಂಟಾಗಿ ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಸಮಾನವಾದ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಹೊಸ ಇ-ಕಾಮರ್ಸ್ ನೀತಿಯನ್ನು ಜಾರಿಗೆ ತಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಇರುವ ಇ-ಕಾಮರ್ಸ್ ಸಂಸ್ಥೆಗಳು ಉದ್ಯಮ ಹಿತಾಸಕ್ತಿ ದೃಷ್ಟಿಯಿಂದ ಒಪ್ಪಂದ ಮಾಡಿಕೊಂಡು ಯಾವುದೇ ಉತ್ಪನ್ನಗಳನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಮಾರಾಟ ಮಾಡುವಂತಿಲ್ಲ. 
ಫೆ.2019 ರಿಂದ ಈ ನಿಯಮ ಜಾರಿಗೆ ಬರಲಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ ಇರುವ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್ ಸಂಸ್ಥೆಗಳ ಮಾರುಕಟ್ಟೆ ತಂತ್ರಗಳಿಗೆ ಕಡಿವಾಣ ಬೀಳಲಿದ್ದು, ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಸಮಾನವಾದ ಅವಕಾಶ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com