2015ರ ಬಳಿಕ ಭಾರೀ ಕುಸಿತ ದಾಖಲಿಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ 4.6 ಲಕ್ಷ ಕೋಟಿ ನಷ್ಟ

ಕಳೆದೆರಡು ದಿನಗಳಲ್ಲಿ ಷೇರುಪೇಟೆಯ ಸತತ ಇಳಿಕೆ ದಾಖಲಿಸುತ್ತಿದ್ದು ಇದರಿಂಡಾಗಿ ಹೂಡಿಕೆದಾರರಿಗೆ ಒಟ್ಟು 4.6 ಲಕ್ಷ ಕೋಟಿ ರೂ. ನಷ್ಟವಾಗಿದೆ.
2015ರ ಬಳಿಕ ಭಾರೀ ಕುಸಿತ ದಾಖಲಿಸಿದ ಷೇರು ಮಾರುಕಟ್ಟೆ
2015ರ ಬಳಿಕ ಭಾರೀ ಕುಸಿತ ದಾಖಲಿಸಿದ ಷೇರು ಮಾರುಕಟ್ಟೆ
ನವದೆಹಲಿ: ಕಳೆದೆರಡು ದಿನಗಳಲ್ಲಿ ಷೇರುಪೇಟೆಯ ಸತತ ಇಳಿಕೆ ದಾಖಲಿಸುತ್ತಿದ್ದು ಇದರಿಂಡಾಗಿ ಹೂಡಿಕೆದಾರರಿಗೆ ಒಟ್ಟು 4.6 ಲಕ್ಷ ಕೋಟಿ ರೂ. ನಷ್ಟವಾಗಿದೆ. 
ಮುಂಬೈ ಷೇರುಪೇಟೆಯು ಇಂದಿನ ವಹಿವಾಟಿನಲ್ಲಿ 839.91 ಅಂಕಗಳ ಕುಸಿತ (ಶೇ.2.34) ದಾಖಲಿಸಿ 35,066.75ಗೆ ಅಂತ್ಯ ಕಂಡಿತು. ಇದರಿಂದ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಒಟ್ಟು ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು 4,58,581.38ಗೆ ಇಳಿಕೆ ಆಗಿದೆ.
2015ರ ಆಗಸ್ಟ್ ನಂತರದಲ್ಲಿ ಇದು ಷೇರು ಮಾರುಕಟ್ಟೆ ಕಂಡ ಮಹಾ ಕುಸಿತವಾಗಿದ್ದು 2015ರ ಆಗಸ್ಟ್ 24ರಂದು ಮಾರುಕಟ್ಟೆಯು 1,624.51 ಅಂಕಗಳ ಕುಸಿತ ದಾಖಲಿಸಿತ್ತು.
2018-19ರ ಬಜೆಟ್ ಈಕ್ವಿಟಿಯಲ್ಲಿ ದೀರ್ಘಾವಧಿಯ ಬಂಡವಾಳ ಹೂಡಿಕೆಯ ಲಾಭದ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದೆ. ಇದರಿಂದಾಗಿ ಈಕ್ವಿಟಿ ಷೇರುಗಳ ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ ಎನ್ನಾಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com