ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆ

ಕೇಂದ್ರ ಬಜೆಟ್ ಮಂಡನೆಯಾದ ಮರುದಿನವೂ ಷೇರುಪೇಟೆಯಲ್ಲಿ ಕರಡಿಯ ಕುಣಿತ ಮಂದುವರಿದಿದೆ.
ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆ
ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆ
ನವದೆಹಲಿ: ಕೇಂದ್ರ ಬಜೆಟ್ ಮಂಡನೆಯಾದ ಮರುದಿನವೂ ಷೇರುಪೇಟೆಯಲ್ಲಿ ಕರಡಿಯ ಕುಣಿತ ಮಂದುವರಿದಿದೆ. ಮುಂಬೈ ಷೇರು ಸೂಚ್ಯಾಂಕ 800 ಅಂಕಗಳ ಕುಸಿತ ದಾಖಲಿಸಿದ್ದರೆ ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 10,800 ಅಂಕಗಳ ಗಡಿಯಿಂದ ಕೆಳಗಿಳಿದಿದೆ.
ಇಕ್ವಿಟಿಗಳ ಮೇಲಿನ ದೀರ್ಘಕಾಲೀನ ಬಂಡವಾಳ ಲಾಭದ ಮೇಲೆ  ತೆರಿಗೆ ಮತ್ತು ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ಆದಾಯದ ಮೇಲೆ ಶೇ.10 ತೆರಿಗೆ ವಿಧಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಸರ್ಕಾರದ ಹೆಚ್ಚಿನ ಸಾಲದ ಹೊರೆಯು ರಾಷ್ಟ್ರದ ರೇಟಿಂಗ್ ಅಪ್ ಗ್ರೇಡ್ ಆಗುವುದನ್ನು ನಿರ್ಬಂಧಿಸುತ್ತದೆ ಎನ್ನುವ ಸೂಚನೆ ಸಿಕ್ಕಿದ್ದು ಸೆನ್ಸೆಕ್ಸ್ 800 ಅಂಕಗಳ ಕುಸಿತದೊಡನೆ 35,080ಕ್ಕೆ ತಲುಪಿದೆ. ನಿಫ್ಟಿ ಸಹ 238.40 ಅಂಕಗಳ ಕುಸಿತ ದಾಖಲಿಸಿದ್ದು 10,778.50ಕ್ಕೆ ಬಂದು ತಲುಪಿದೆ.
ನಿನ್ನೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2018-2019ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಇದರ ಬೆನ್ನಲ್ಲೇ ಸೆನ್ಸೆಕ್ಸ್ 480ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿತ್ತು. ಇಂದು ಸಹ ಷೇರುಪೇಟೆ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಹೂಡಿಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com