ಪಕ್ಷಪಾತ ಶೋಧ ಮಾಹಿತಿ: ಸ್ಪರ್ಧಾ ಆಯೋಗದಿಂದ ಗೂಗಲ್ ಗೆ 136 ಕೋಟಿ ದಂಡ!

ಪಕ್ಷಪಾತ ಮಾಡಿದ ಆರೋಪದಡಿಯಲ್ಲಿ ಖ್ಯಾತ ಆನ್ ಲೈನ್ ಶೋಧ ತಾಣ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೊಬ್ಬರಿ 136 ಕೋಟಿ ದಂಡ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಕ್ಷಪಾತ ಮಾಡಿದ ಆರೋಪದಡಿಯಲ್ಲಿ ಖ್ಯಾತ ಆನ್ ಲೈನ್ ಶೋಧ ತಾಣ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೊಬ್ಬರಿ 136 ಕೋಟಿ ದಂಡ ವಿಧಿಸಿದೆ.
ಭಾರತದಲ್ಲಿ ಆನ್ ಲೈನ್ ಶೋಧತಾಣಗಳಲ್ಲಿ ಗೂಗಲ್ ಗೆ ಅಗ್ರಸ್ಥಾನವಿದ್ದು, ಅತೀ ಹೆಚ್ಚು ಮಂದಿ ಭಾರತೀಯರು ಆನ್ ಲೈನ್ ಶೋಧಕ್ಕಾಗಿ ಗೂಗಲ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತನ್ನ ಲಾಭಕ್ಕಾಗಿ ಬಳಿಸಿಕೊಂಡ  ಗಂಭೀರ ಆರೋಪ ಗೂಗಲ್ ಮೇಲೆ ಇದ್ದು, ಬಳಕೆದಾರರಿಗೆ ಆನ್ ಲೈನ್ ಶೋಧದ ವೇಳೆ ಕೆಲ ಕಂಪನಿಗಳ ಪರವಾದ ಮಾಹಿತಿಗಳನ್ನು ನೀಡುತ್ತಿದೆ ಎಂಬ ಆರೋಪದ ಮೇರೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್  ಇಂಡಿಯಾ 136 ಕೋಟಿ ದಂಡ ವಿಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಐನ ಅಧಿಕಾರಿಯೊಬ್ಬರು, ಭಾರತದಲ್ಲಿ ಆನ್ಲೈನ್ ಹುಡುಕಾಟ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಗೂಗಲ್, ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವೊಂದು ಸಂಸ್ಥೆಗಳ ಪರವಾಗಿ ಕಾರ್ಯ  ನಿರ್ವಹಿಸುವ ಮೂಲಕ ನಿಯಮ ಬಾಹಿರವಾಗಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ. ಅಂತೆಯೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಲ್‌ಐಸಿ, ಮ್ಯಾಟ್ರಿಮೋನಿಯಲ್.ಕಾಂ ಸೇರಿದಂತೆ ಹಲವು ಕಂಪನಿಗಳು 2012ರಲ್ಲಿ ಸಿಸಿಐಗೆ  ದೂರು ಸಲ್ಲಿಸಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸಿಸಿಐ ಇದೀಗ, ಗೂಗಲ್ ಇಂಡಿಯಾ ಸಂಸ್ಥೆಗೆ ಭಾರಿ ಪ್ರಮಾಣದ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆಯೂ ಕೂಡ ನಂಬಿಕೆ ದ್ರೋಹ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂರೋಪಿಯನ್ ಒಕ್ಕೂಟ 16 ಸಾವಿರ ಕೋಟಿ ರೂ. ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com