ಏರ್ ಸೆಲ್ ದಿವಾಳಿ : ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣಕ್ಕೆ ಅರ್ಜಿ

ಏರ್ ಸೆಲ್ ಕಂಪನಿ ಹಲವು ಸಂದರ್ಭಗಳಲ್ಲಿ ಹಣಕಾಸಿನ ತೊಂದರೆಗೊಳಗಾಗಿದ್ದು, ದಿವಾಳಿ ಎಂದು ಘೋಷಿಸಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನುನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಎರ್ ಸೆಲ್ ಕಂಪನಿಯ (ಸಾಂದರ್ಭಿಕ ಚಿತ್ರ)
ಎರ್ ಸೆಲ್ ಕಂಪನಿಯ (ಸಾಂದರ್ಭಿಕ ಚಿತ್ರ)

ಮುಂಬೈ: ಟಿ. ಅನಂದ್ ಕೃಷ್ಣನ್ ಮಾಲೀಕತ್ವದ ಏರ್ ಸೆಲ್ ಕಂಪನಿ ಹಲವು ಸಂದರ್ಭಗಳಲ್ಲಿ ಹಣಕಾಸಿನ ತೊಂದರೆಗೊಳಗಾಗಿದ್ದು, ದಿವಾಳಿ ಎಂದು ಘೋಷಿಸಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಬೃಹತ್ ಪ್ರಮಾಣದ ವ್ಯವಹಾರ ನಷ್ಠದಿಂದಾಗಿ ಕಂಪನಿ ಸಾಲ ಹೆಚ್ಚಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಕಂಪನಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ಏರ್ ಸೆಲ್ ಕಂಪನಿ ಜೊತೆಗೆ ಅದರ ಅಂಗಸಂಸ್ಥೆಗಳಾದ ಏರ್ ಸೆಲ್ ಸೆಲ್ಯೂಲರ್ ಮತ್ತು ಡಿಸ್ ನೆಟ್ ವೈರ್ ಲೆಸ್ ಸಂಸ್ಥೆಗಳನ್ನೂ ಕೂಡಾ ದಿವಾಳಿ ಎಂದು ಘೋಷಿಸಬೇಕೆಂದು ಒತ್ತಾಯಿಸಲಾಗಿದೆ.

ಮಲೇಷಿಯಾ ಮೂಲದ ಮಾಕ್ಸಿಸ್ ಕಂಪನಿ ಜೊತೆಗಿನ ಷೇರು ಮತ್ತು ಸಾಲದ ಕುರಿತಾದ ಒಪ್ಪಂದ ವಿಫಲವಾದ ನಂತರ ಏರ್ ಸೆಲ್ ಕಂಪನಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com