2 ಸಾವಿರ ರು. ವರೆಗಿನ ನಗದುರಹಿತ ವಹಿವಾಟಿಗೆ ಶುಲ್ಕವಿಲ್ಲ: ಅರುಣ್ ಜೇಟ್ಲಿ

ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇವಲ ಡೆಬಿಟ್ ಕಾರ್ಡ್ ಮಾತ್ರವಲ್ಲದೇ ಭೀಮ್ ಆ್ಯಪ್ ಮತ್ತು ಇತರೆ ನಗದು ರಹಿತ ಸೇವೆಗಳಿಗೂ ಇದು ಅನ್ವಯವಾಗಲಿದ್ದು, 2 ಸಾವಿರ ವರೆಗಿನ ಮೊತ್ತ ಪಾವತಿಗೆ ಯಾವುದೇ ರೀತಿಯ ಶುಲ್ಕವಿಲ್ಲ ಎಂದು ಜೇಟ್ವಿ ಅವರು  ಹೇಳಿದ್ದಾರೆ.  ಈ ಹಿಂದೆಯೇ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರಂತೆ ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ  ಕೇಂದ್ರ ಸರ್ಕಾರ ಎಂಡಿಆರ್ ಶುಲ್ಕವನ್ನು ರದ್ದುಗೊಳಿಸುವ ಸಂಬಂಧ ನಿರ್ಧಾರ ಕೈಗೊಂಡಿತ್ತು. ಇದೀಗ ಈ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿತ್ತ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು, 2017ರಲ್ಲಿ ಭೀಮ್ ಆ್ಯಪ್ ನ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ವಹಿವಾಟಿನ  ಪ್ರಮಾಣದಲ್ಲಿ ಶೇ,86ರಷ್ಚು ಏರಿಕೆಯಾಗಿದೆ.  ಒಟ್ಟು ಸುಮಾರು 145.6 ಮಿಲಿಯನ್ ಬಳಕೆದಾರರು ಈ ಆ್ಯಪ್ ಅನ್ನು ಬಳಕೆ ಮಾಡಿದ್ದು, ಒಟ್ಟು 13, 174 ಕೋಟಿ ವಹಿವಾಟು ನಡೆದಿದೆ. ಪ್ರಸ್ತುತ ಸರ್ಕಾರ ಎಂಡಿಆರ್ ಶುಲ್ಕ ತೆರವು  ಮಾಡಿರುವುದರಿಂದ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ನೂತನ ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com