ನೇರ ತೆರಿಗೆಯ ಸಂಗ್ರಹಣೆ ಶೇ.67 ರಷ್ಟು ಒಟ್ಟು ಬಜೆಟ್ ನ ಅಂದಾಜಿನಲ್ಲಿರಲಿದ್ದು 2017-18 ಕ್ಕೆ 9.8 ಲಕ್ಷ ಕೋಟಿಯಷ್ಟಾಗಲಿದೆ ಎಂದು ಹಣಕಾಸು ಇಲಾಖೆ ಮಾಡಿರುವ ಟ್ವೀಟ್ ಮೂಲಕ ತಿಳಿದುಬಂದಿದೆ. ನೇರ ತೆರಿಗೆಯ ಕೇಂದ್ರ ಮಂಡಳಿ (ಸಿಬಿಡಿಟಿ) ಪ್ರಕಾರ ರಿಫಂಡ್ಸ್ ನ್ನು ಅಂತಿಮಗೊಳಿಸುವುದಕ್ಕೂ ಮುನ್ನ 7.68 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿತ್ತು, ಮರುಪಾವತಿ ಮೊತ್ತ 1.12 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಇನ್ನು 3.18 ಲಕ್ಷ ಕೋಟಿ ರೂಪಾಯಿ ಮುಂಗಡ ತೆರಿಗೆ ಸಂಗ್ರಹವಾಗಿದೆ.