ಮೂಲಗಳ ಪ್ರಕಾರ ಡೀಸೆಲ್ ದರ ಪ್ರತಿ ಲೀಟರ್‌ಗೆ ದಾಖಲೆಯ 61.74 ರೂ.ಗೆ ಹಾಗೂ ಪೆಟ್ರೋಲ್ ದರ 71 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್ ದರ ರಾಜಧಾನಿ ದೆಹಲಿಯಲ್ಲಿ ಲೀಟರ್‌ಗೆ 71.18 ರೂ.ಗೆ ಏರಿಕೆಯಾಗಿದ್ದು, 2014ರ ಆಗಸ್ಟ್ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಗರಿಷ್ಟ ಮಟ್ಟಕ್ಕೇರಿದೆ. ಇನ್ನು ಡೀಸೆಲ್ ದರ ದೆಹಲಿಯಲ್ಲಿ ಲೀಟರ್ ಗೆ 61.74 ರೂ ಗಳಾಗಿದ್ದು, ಹಾಗೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 65.74 ರೂ.ಗಳಿಗೆ ಏರಿಕೆಯಾಗಿದೆ. ಇನ್ನು ದರ ಏರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರಗಳು ಏರುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಇದಲ್ಲದೇ ಹೆಚ್ಚಿನ ಪ್ರಮಾಣಜ ವ್ಯಾಟ್ ಕೂಡ ದರ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ.