ಇದೇ ಮೊದಲ ಬಾರಿಗೆ 35 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಇದೇ ಮೊದಲ ಬಾರಿಗೆ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ(ಬಿಎಸ್ ಇ) ಸೆನ್ಸೆಕ್ಸ್‌....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಇದೇ ಮೊದಲ ಬಾರಿಗೆ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ(ಬಿಎಸ್ ಇ) ಸೆನ್ಸೆಕ್ಸ್‌ ಬುಧವಾರ 35 ಸಾವಿರ ಗಡಿ ದಾಟುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು.
ಸೆನ್ಸೆಕ್ಸ್‌ ಮೊದಲ ಬಾರಿಗೆ 231.73 ಅಂಕಗಳ ಜಿಗಿತ ಕಾಣುವ ಮೂಲಕ 35,000 ಅಂಕಗಳ ಮೈಲುಗಲ್ಲನ್ನು ಕ್ರಮಿಸಿದೆ. ಜನವರಿ 15ರಂದು ಸೆನ್ಸೆಕ್ಸ್‌ 34,963.66 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು.
ಕಳೆದ ಡಿಸೆಂಬರ್ ಸೆನ್ಸೆಕ್ಸ್‌ 33,000ದಿಂದ 34,000 ಅಂಕಗಳಿಗೆ ಏರಿಕೆಯಾಗಲು ಕೇವಲ ಎರಡೇ ತಿಂಗಳನ್ನು ತೆಗೆದುಕೊಂಡಿತ್ತು. ಅಕ್ಟೋಬರ್‌ 25ರಂದು ಸೂಚ್ಯಂಕ 33,000ಕ್ಕೆ ತಲುಪಿತ್ತು. ವಿಶೇಷವೇನೆಂದರೆ ಸೆನ್ಸೆಕ್ಸ್‌ 30,000ದಿಂದ 31,000 ಅಂಕಗಳಿಗೆ ಏರಲು 2015ರಿಂದ 2017ರ ತನಕ ಎರಡು ವರ್ಷ ತೆಗೆದುಕೊಂಡಿತ್ತು. ಆದರೆ 31,000ದಿಂದ 34,000ಕ್ಕೆ ಜಿಗಿಯಲು ತೆಗೆದುಕೊಂಡಿದ್ದು ಕೇವಲ 7 ತಿಂಗಳು! ಈ ವರ್ಷ ಮೇನಲ್ಲಿ 31 ಸಾವಿರಕ್ಕೆ ಏರಿದ್ದ ಸೆನ್ಸೆಕ್ಸ್‌ ಡಿಸೆಂಬರ್‌ನಲ್ಲಿ 34 ಸಾವಿರದ ಗಡಿ ದಾಟಿದೆ.
ಏಶ್ಯನ್‌ ಶೇರು ಪೇಟೆಗಳಲ್ಲಿ ದೌರ್ಬಲ್ಯ ತೋರಿ ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆಯಲ್ಲಿಂದು ಹೂಡಿಕೆದಾರರು ಮತ್ತು ವಹಿವಾಟುದಾರರು ಐಟಿ, ಬ್ಯಾಂಕಿಂಗ್‌ ಮತ್ತು ಆಟೋ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ ಪರಿಣಾವಾಗಿ ಇಂದು ಸೆನ್ಸೆಕ್ಸ್‌  ಹೊಸ ದಾಖಲೆ ನಿರ್ಮಿಸಿದೆ. 
ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್‌ 72 ಅಂಕಗಳ ನಷ್ಟದಲ್ಲಿ ಕೊನೆಗೊಳಿಸಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 25 ಪೈಸೆಯಷ್ಟು ಸುಧಾರಿಸಿ 63.78 ರು. ಮಟ್ಟಕ್ಕೇರಿತು. 
ಇನ್‌ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌, ರಿಲಯನ್ಸ್‌, ಎಚ್‌ ಡಿ ಎಫ್ ಸಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com