ವಾರೆನ್ ಬಫೆಟ್ ಹಿಂದಿಕ್ಕಿದ ಫೇಸ್ ಬುಕ್ ಸಂಸ್ಥಾಪಕ ಝುಕರ್‍ಬರ್ಗ್ ವಿಶ್ವದ ಮೂರನೇ ಶ್ರೀಮಂತ!

ಫೇಸ್ ಬುಕ್ ಇಂಕ್ ನ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಮಾರ್ಕ್ ಝುಕರ್‍ಬರ್ಗ್
ಮಾರ್ಕ್ ಝುಕರ್‍ಬರ್ಗ್
ನ್ಯೂಯಾರ್ಕ್: ಫೇಸ್ ಬುಕ್ ಇಂಕ್ ನ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ  ತಂತ್ರಜ್ಞಾನವು ಸಂಪತ್ತಿನ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ದೃಢಪಡಿಸಿದ್ದಾರೆ
ಅಮೆಜಾನ್.ಕಾಂ ಸಂಸ್ಥಾಪಕ ಜೆಫ್ ಬೆಝೋಸ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಬಳಿಕ ಬಳಿಕದ ಸ್ಥಾನವನ್ನು ಝುಕರ್‍ಬರ್ಗ್ ಪಡೆದಿದ್ದಾರೆ. ಶುಕ್ರವಾರ ಫೇಸ್ ಬುಕ್ ಷೇರುಗಳ ಮೌಲ್ಯ ಶೆ.2.4ರಷ್ಟು  ಏರಿಕೆ ಕಂಡಿದ್ದು ಪ್ರಸಿದ್ಧ ಉದ್ಯಮಿ ವಾರನ್ ಬಫೆಟ್ ಅವರನ್ನೂ ಹಿಂದಿಕ್ಕಿ ಝುಕರ್‍ಬರ್ಗ್ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿದ ಮೂರು ಸಂಸ್ಥೆಗಳ ದಿಗ್ಗಜರು ವಿಶ್ವದ ಟಾಪ್ ತ್ರೀ ಶ್ರೀಮಂತರಾಗಿದ್ದಾರೆ.
ಝುಕರ್‍ಬರ್ಗ್ ಒಟ್ಟು ಆಸ್ತಿ ಮೌಲ್ಯ81.6 ಶತಕೋಟಿ ಡಾಲರ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com