ಅಧ್ಯಕ್ಷ ಸ್ಥಾನದಿಂದ ವಜಾ: ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿಯಿಂದ ಸೈರಸ್ ಮಿಸ್ತ್ರಿ ಅರ್ಜಿ ತಿರಸ್ಕೃತ

ಟಾಟಾ ಸನ್ಸ್ ನ ಅಧ್ಯಕ್ಷ ಸ್ಥಾನದಿಂದ ತನ್ನನ್ನು ತೆಗೆದುಹಾಕಿದ್ದನ್ನು ಪ್ರಶ್ನಿಸಿ ಟಾಟಾ ಗ್ರೂಪ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ಸಿಎಲ್ಟಿ) ವಜಾ ಮಾಡಿದೆ.
ಅಧ್ಯಕ್ಷ ಸ್ಥಾನದಿಂದ ವಜಾ: ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿಯಿಂದ ಸೈರಸ್ ಮಿಸ್ತ್ರಿ ಅರ್ಜಿ ತಿರಸ್ಕೃತ
ಅಧ್ಯಕ್ಷ ಸ್ಥಾನದಿಂದ ವಜಾ: ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿಯಿಂದ ಸೈರಸ್ ಮಿಸ್ತ್ರಿ ಅರ್ಜಿ ತಿರಸ್ಕೃತ
ಮುಂಬೈ: ಟಾಟಾ ಸನ್ಸ್ ನ ಅಧ್ಯಕ್ಷ ಸ್ಥಾನದಿಂದ ತನ್ನನ್ನು ತೆಗೆದುಹಾಕಿದ್ದನ್ನು ಪ್ರಶ್ನಿಸಿ ಟಾಟಾ ಗ್ರೂಪ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ಸಿಎಲ್ಟಿ) ವಜಾ ಮಾಡಿದೆ.
ಟಾಟಾ ಸಮೂಹ ಹಾಗೂ ಅದರ ಬಹುತೇಕ ಸದಸ್ಯರ ವಿಶ್ವಾಸವನ್ನು ಮಿಸ್ತ್ರಿ ಕಳೆದುಕೊಂಡಿದ್ದರು. ಈ ಕಾರಣಕ್ಕೆ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು ಎಂದು ಎನ್ಸಿಎಲ್ಟಿ  ಮುಂಬೈ ಶಾಖೆ ಮುಖ್ಯಸ್ಥ  ಬಿ. ಎಸ್. ಪ್ರಕಾಶ್ ಕುಮಾರ್ ಹಾಗು ವಿ. ನಳಸೇನಪತಿ  ತೀರ್ಪಿನಲ್ಲಿ ಹೇಳಿದರು.
ಮಿಸ್ತ್ರಿ ಅವರ ವಾದಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದ ನ್ಯಾಯಮಂಡಲಿ ಬೋರ್ಡ್ ಮತ್ತು ಷೇರುದಾರರಿಗೆ  ದೌರ್ಜನ್ಯದ ಕಾರಣದಿಂದಾಗಿ ಮಿಸ್ತ್ರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆಂದು ಹೇಳುವುದು ಸರಿಯಲ್ಲ ಎಂದಿದೆ.
ಮಿಸ್ತ್ರಿ ಸಂಸ್ಥೆಯ ಕುರಿತ ಕೆಲವು ಪ್ರಮುಖ ಮಾಹಿತಿಗಳನ್ನು ಐಟಿ ಇಲಾಖೆಗೆ ಸಲ್ಲಿಸಿದ ಕಾರ್ಣದಿಂಡಾಗಿ ಬೋರ್ಡ್ ಹಾಗೂ ಇತರೆ ಸದಸ್ಯರು ಅವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ಸಂಸ್ಥೆಯ ಗೌಪ್ಯ ಮಾಹಿತಿ ಮಾದ್ಯಮಗಳಿಗೆ ಸೋರಿಕೆಯಾದ ಬೆನ್ನಲ್ಲಿಯೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲಿಸಿ ಹೊರಬರಬೇಕಾಯಿತು ಎಂದು ಮಂಡಳಿ ಹೇಳಿದೆ.
ಅಕ್ಟೋಬರ್ 2016 ರಲ್ಲಿ, ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಚ್ಯುತಿಗೊಳಿಸಲಾಗಿತ್ತು.
ಇದಾಗಿ ಎರಡು ತಿಂಗಳ ಬಳಿಕ ಮಿಸ್ತ್ರಿ ಅವರ ಕುಟುಂಬ ಹಾಗೂ ಕುಟುಂಬದ ಹೂಡಿಕೆ ಸಂಸ್ಥೆಯಾದ ಸೈರಸ್ ಇನ್ವೆಸ್ಟ್ಮೆಂಟ್ಸ್ ತಾಟಾ ಸಂಸ್ಥೆ ಹಾಗೂ ಅಧ್ಯಕ್ಷ ರತನ್ ಟಾಟಾ ಏಕಪಕ್ಷೀಯವಾಗಿ ಅಲ್ಪಸಂಖ್ಯಾತ ಷೇರುದಾರರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿ ಎನ್ಸಿಎಲ್ಟಿಯ ಮೊರೆ ಹೊಕ್ಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com