ಚಿಲ್ಲರೆ ಹಣದುಬ್ಬರ ಐದು ತಿಂಗಳಲ್ಲೇ ಗರಿಷ್ಠ, ಜೂನ್ ನಲ್ಲಿ ಶೇ.5ಕ್ಕೆ ಏರಿಕೆ

ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ (ಸಿಎಸ್‌ಒ) ಗುರುವಾರ ತಿಳಿಸಿದೆ. 
ಗ್ರಾಹಕ ದರ ಸೂಚ್ಯಂಕ ಆಧಾರದ ಮೇಲೆ ಸಿಎಸ್‌ಒ ವರದಿ ತಯಾರಿಸಿದ್ದು, ಇದರನ್ವಯ, ಕಳೆದ ಮೇ ತಿಂಗಳಲ್ಲಿ ಶೇ.4.87ರಷ್ಟಿದ್ದ ಚಿಲ್ಲರೆ ಹಣದುಬ್ಬರ ಜೂನ್ ನಲ್ಲಿ ಶೇ.5ಕ್ಕೆ ಏರಿಕೆಯಾಗಿದೆ.
ಇಂಧನ ಬೆಲೆ ಏರಿಕೆಯೇ ಹಣದುಬ್ಬರ ಏರಿಕೆಗೆ ಕಾರಣ ಎಂದು ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಆರ್ ಬಿಐಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com