ಏಷ್ಯಾದ ಶ್ರೀಮಂತ ವ್ಯಕ್ತಿ; ಅಲಿಬಾಬಾ ಜಾಕ್ ಮಾ ಹಿಂದಿಕ್ಕಿದ ಮುಖೇಶ್ ಅಂಬಾನಿ

ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಲಿಬಾಬಾ ಡಾಟ್ ಕಾಮ್ ನ ಜಾಕ್ ಮಾ ಅವರನ್ನು ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಲಿಬಾಬಾ ಡಾಟ್ ಕಾಮ್ ನ ಜಾಕ್ ಮಾ ಅವರನ್ನು ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬ್ಲೂಮ್​ಬರ್ಗ್ ಇಂದು ಬಿಡುಗಡೆ ಮಾಡಿರುವ  ವರದಿ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರು ಅಲಿ ಬಾಬಾ ಡಾಟ್ ಕಾಂನ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ. ಮುಖೇಶ್​ ಅಂಬಾನಿ 44.3 ಬಿಲಿಯನ್​ ಡಾಲರ್​ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಜಾಕ್​ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್​ ಡಾಲರ್​ ಆಸ್ತಿಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ಅಂತರದಿಂದ ಅಂಬಾನಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಇಂದು 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆಯಾಗಿ ದಾಖಲೆ ಬರೆದಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡಿದ್ದು, ಇಂದು ಸಂಜೆಯೊಳಗೆ ಶೇ. 1.7ರಷ್ಟು ಹೆಚ್ಚಳಗೊಂಡಿದೆ.
ಈಗಾಗಲೇ 21.5 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮೈಲಿಗಲ್ಲು ಸ್ಥಾಪಿಸಿದ್ದು, ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡುವಂತೆ ಹಲವು ಆಫರ್​ಗಳನ್ನು ನೀಡುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಈ ತಿಂಗಳಲ್ಲಿ ಅಂಬಾನಿ 4ಕೆ ರೆಸಲ್ಯೂಷನ್​ನ ಅಡ್ವಾನ್ಸ​ಡ್​ ಫೈಬರ್​ ಒಳಗೊಂಡಿರುವ ಜಿಯೋ ಗಿಗಾಫೈಬರ್​ ಎಂಬ ಬ್ರಾಡ್​ ಬ್ಯಾಂಡ್ ಸೇವೆಯನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com