ವಾರಸುದಾರರಿಲ್ಲದೆ ವಿಮಾ ಸಂಸ್ಥೆಗಳಲ್ಲಿ ಕೊಳೆಯುತ್ತಿದೆ 15,167 ಕೋಟಿ ರು.!

ದೇಶದ ಒಟ್ಟು 23 ವಿಮಾ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 15, 167 ಕೋಟಿ ರುಪಾಯಿ ಕೊಳೆಯುತ್ತಾ ಬಿದ್ದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದ ಒಟ್ಟು 23 ವಿಮಾ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 15, 167 ಕೋಟಿ ರುಪಾಯಿ ಕೊಳೆಯುತ್ತಾ ಬಿದ್ದಿದೆ. 
ಐಆರ್ಡಿಎಐ ದತ್ತಾಂಶದ ಪ್ರಕಾರ, ವಿಮೆ ಮಾಡಿದ ಬಳಿಕ ಅದನ್ನು ಮರೆತುಬಿಟ್ಟಿದ್ದರಿಂದ ಮತ್ತು ವಾರಸುದಾರರಿಗೆ ವಿಮೆಯ ಮಾಹಿತಿಯಿಲ್ಲದೇ ಇರುವುದರಿಂದ 15,167 ಕೋಟಿ ರುಪಾಯಿ ವಾರಸುದಾರರಿಲ್ಲದ ಹಣ ಜಮೆಯಾಗಿದೆ. 
2018ರ ಮಾರ್ಚ್ 31ರವರೆಗೂ 15,166 ಕೋಟಿ ರುಪಾಯಿ ಬಾಕಿ ಉಳಿದಿದ್ದು ಈ ಪೈಕಿ ಎಲ್ಐಸಿ 10,509 ಕೋಟಿ ರುಪಾಯಿ, ಉಳಿದ 22 ಖಾಸಗಿ ಸಂಸ್ಥೆಗಳು 4,657.47 ಕೋಟಿ ರೂಪಾಯಿ ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com