ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!

ಏರಿಕೆ ಕಡೆ ಮುಖ ಮಾಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ನಾಲ್ಕು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದೆ...
Petrol, Diesel
Petrol, Diesel
Updated on
ನವದೆಹಲಿ: ಏರಿಕೆ ಕಡೆ ಮುಖ ಮಾಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ನಾಲ್ಕು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 9 ಪೈಸೆಯಷ್ಟು ಕಡಿಮೆಯಾಗಿದೆ. 
ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ 78.29 ಇದ್ದು ಇದೀಗ 9 ಪೈಸೆಯಷ್ಟು ಕಡಿಮೆಯಾಗಿದ್ದು ಪೆಟ್ರೋಲ್ ದರ 78.20 ರುಪಾಯಿ ಆಗಿದೆ. ಇನ್ನು ಡೀಸೆಲ್ ದರ 69.20 ಇದ್ದು ಇದೀಗ ದರ ಇಳಿಕೆ ಬಳಿಕ 68.11 ರುಪಾಯಿ ಆಗಿದೆ.
ಇನ್ನು ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 80.84 ರು. ಮುಂಬೈನಲ್ಲಿ 86.01 ರು. ಹಾಗೂ ಚೆನ್ನೈನಲ್ಲಿ 81.19 ರುಪಾಯಿ ಇದೆ. ಕೊಲ್ಕತ್ತಾದಲ್ಲಿ ಡೀಸೆಲ್ ದರ 71.66 ರು. ಮುಂಬೈನಲ್ಲಿ 73.58 ರು. ಹಾಗೂ ಚೆನ್ನೈನಲ್ಲಿ 72.97 ರುಪಾಯಿ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com