ಸೀಮಾ ಸುಂಕ ಪಾವತಿಸದ ನೀರವ್ ಮೋದಿ ವಿರುದ್ಧ ಬಂಧನ ವಾರಂಟ್

ಸೀಮಾ ಸುಂಕ ಪಾವತಿಸದ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮೆರೆಸಿಕೊಂಡಿರುವ ವಜ್ರ ಉದ್ಯಮಿ ನೀರವ್ ಮೋದಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ.
ನೀರವ್ ಮೋದಿ ಚಿತ್ರ
ನೀರವ್ ಮೋದಿ ಚಿತ್ರ

 ಸೂರತ್: ಸೀಮಾ ಸುಂಕ  ಪಾವತಿಸದ   ಪ್ರಕರಣದಲ್ಲಿ  ವಿದೇಶದಲ್ಲಿ ತಲೆಮೆರೆಸಿಕೊಂಡಿರುವ ವಜ್ರ ಉದ್ಯಮಿ ನೀರವ್  ಮೋದಿ  ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಅಪರಾಧ ವಿಧಾನ ಕಾಯ್ದೆ 1973ರ ಸೆಕ್ಷನ್ 70 ರ ಅಡಿಯಲ್ಲಿ ಸೂರತ್ ನ ಮುಖ್ಯ  ನ್ಯಾಯಾಲಯದ ಮುಖ್ಯ ನ್ಯಾಯಾಂಗ  ನ್ಯಾಯಾಧೀಶ ಮ್ಯಾಜಿಸ್ಟ್ರೇಟ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.ಈ ವರ್ಷದ ಮಾರ್ಚ್ ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ  ಪ್ರಾಸಿಕ್ಯೂಸನ್ ಸೂರತ್ ನ್ಯಾಯಾಲಯದಲ್ಲಿ ನಡೆಯಲಿದೆ .

ಡಿಸೆಂಬರ್ 2014 ರಲ್ಲಿ,  ಜಾಗೃತ ದಳ ಡಿ ಆರ್ ಪಿ, ಪರಿಶೀಲನೆ ನಡೆಸಿದಾಗ ಏರ್ ಕಾರ್ಗೋ ಕಾಂಪ್ಲೆಕ್ಸ್, ಸಹಾರ , ಮುಂಬೈನಿಂದ   ಹಾಂಗ್ ಕಾಂಗ್, ಮತ್ತು ದುಬೈಗೆ ಸಾಗಿಸಲು  ಉದ್ದೇಶಿಸಲಾಗಿದ್ದ ಪಾಲಿಶ್ಡ್ ಡೈಮಂಡ್ಸ್    ಸರಕುಗಳ  ಗುಣಮಟ್ಟ, ಪ್ರಮಾಣ ಮತ್ತು ಮೌಲ್ಯದಲ್ಲಿ ತಪ್ಪಾಗಿ ಘೋಷಣೆಗೊಂಡಿದ್ದವು,  

ಸರಕುಗಳ ಮೇಲಿನ ಮಂಡಳಿ (ಎಫ್ ಒಬಿ) ಆರು ಸರಕುಗಳ ಮೌಲ್ಯವನ್ನು 43. 10  ಕೋಟಿ ರೂಪಾಯಿ ಎಂದು ಘೋಷಿಸಿತ್ತು. ಆದರೆ. ಅವುಗಳ ಅಧಿಕೃತ ಬೆಲೆ ಕೇವಲ 4.93 ಕೋಟಿ ರೂಪಾಯಿ ಆಗಿತ್ತು. ಡಿಆರ್ ಐ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲಾಗಿ, ಸೂರತ್ ನಲ್ಲಿರುವ   ನೀರವ್ ಮೋದಿಗೆ ಸೇರಿದ ಮೂರು ಕಂಪನಿಗಳಾದ ಎಫ್ ಐಪಿಎಲ್,  ಎಫ್ ಡಿಐಪಿಎಲ್,  ಮತ್ತು ಆರ್ ಜೆಸಿಪಿಎಲ್  ಸುಂಕ ಪಾವತಿಸದೆ ಉಚಿತವಾಗಿ ಮುತ್ತುಗಳು, ಸಿಪಿಡಿಎಸ್ ಸೇರಿದಂತೆ  ಸರಕುಗಳನ್ನು ಆಮದು ಮಾಡಿಕೊಂಡಿರುವುದು ಕಂಡುಬಂದಿತ್ತು.

ಮುತ್ತುಗಳು ಹಾಗೂ ಸಿಪಿಡಿಯಿಂದ 1205 ಕೋಟಿ ರೂಪಾಯಿ ಮೊತ್ತದ ವಸ್ತುಗಳನ್ನು ಉಚಿತವಾಗಿ ರಪ್ತು ಮಾಡಿಕೊಳ್ಳಲಾಗಿದೆ. ಈ ರೀತಿ ಅಡ್ಡ ಮಾರ್ಗದಲ್ಲಿ ತಪ್ಪಿಸಿಕೊಂಡ ತೆರಿಗೆ ಮೊತ್ತ 48. 21 ಕೋಟಿ ರೂಪಾಯಿ ಆಗಿದೆ.

ವಿಚಾರಣೆ ಪ್ರಕ್ರಿಯೆ ಮುಗಿದ ನಂತರ  1962ರ ಕಸ್ಟಮ್ ಕಾಯ್ದೆ ಸೆಕ್ಷನ್  132, 135, ಹಾಗೂ ಭಾರತೀಯ ಅಪರಾಧ ಕಾಯ್ದೆ ಸೆಕ್ಷನ್ 120 ಬಿ  ಅಡಿಯಲ್ಲಿ ನೀರಾವ್ ಮೋದಿ ಹಾಗೂ ಮೂರು ಕಂಪನಿಗಳ ವಿರುದ್ದ ಪ್ರಾಸಿಕ್ಯೂಸನ್ ದಾಖಲಿಸಲಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com