• Tag results for ಬಂಧನ

ಉಡುಪಿ: ಕೋಳಿಅಂಕದಲ್ಲಿ ಕಾನೂನುಬಾಹಿರವಾಗಿ ಜೂಜು ಕಟ್ಟಿದ್ದ ಏಳು ಜನರ ಬಂಧನ

ಜಿಲ್ಲೆಯ ಕಾವಡಿ ಮಹಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ನಡೆದಿದ್ದ ಕೋಳಿಅಂಕದಲ್ಲಿ ಕಾನೂನುಬಾಹಿರವಾಗಿ ಜೂಜಾಡುತ್ತಿದ್ದ 7 ಜನರನ್ನು ಕೋಟಾ ಪೊಲೀಸರು ಬಂಧಿಸಿ ಅವರಿಂದ 1.72 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

published on : 7th April 2020

ಮೆಹಬೂಬಾ ಮುಫ್ತಿ ಮನೆಗೆ ಶಿಫ್ಟ್: ಗೃಹ ಬಂಧನ ಮುಂದುವರಿಕೆ

ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಕಾರಾಗೃಹದಿಂದ ಜೈಲಿಗೆ ಸ್ಥಳಾಂತರಿಸಿದ್ದು, ಗೃಹ ಬಂಧನ ಮುಂದುವರಿಸಲಾಗಿದೆ. ಮೌಲಾನಾ ಆಜಾದ್ ರಸ್ತೆಯಲ್ಲಿದ್ದ ಕಾರಾಗೃಹದಿಂದ ಮುಫ್ತಿ ಅವರ ಅಧಿಕೃತ ನಿವಾಸಕ್ಕೆ ಶಿಫ್ಟ್ ಮಾಡಲಾಗಿದೆ. 

published on : 7th April 2020

ಕರ್ತವ್ಯ ನಿರತ ಪೊಲೀಸರಿಗೆ ಬೆದರಿಕೆ: ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್ ಗಳ ಬಂಧನ

ಕರ್ತವ್ಯ ನಿರತ ಪೊಲೀಸರಿಗೆ ಬೆದರಿಕೆ ಹಾಕಿದ್ದ ಸಂಬಂಧ ದೇವನಹಳ್ಳಿ ಪೋಲೀಸರು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್ ಗಳನ್ನು ಬಂಧಿಸಿದ್ದಾರೆ.

published on : 6th April 2020

ಮಹಾರಾಷ್ಟ್ರ: ಕೊರೋನಾ ಬಗ್ಗೆ ನಕಲಿ ಸುದ್ದಿ, 11 ಜನರು ಬಂಧನ, 85 ಎಫ್ ಐಆರ್

ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಹರಡುವಿಕೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹಾಗೂ ವದಂತಿಗಳನ್ನು ಹರಡುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರ ಸೈಬರ್ ಪೊಲೀಸರು 11 ಮಂದಿಯನ್ನು ಬಂಧಿಸಿದ್ದು, ಇತರ 85 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

published on : 6th April 2020

ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಆರೋಪ: ಹಾಸನದಲ್ಲಿ ಮೂವರ ಬಂಧನ

ಮಾರಕ ಕೊರೋನಾ ಮಧ್ಯೆ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಲು ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. 

published on : 6th April 2020

ದೆಹಲಿ ಗಲಭೆ ಪ್ರಕರಣ: 35 ವರ್ಷದ ಜಾಮಿಯಾ ವಿದ್ಯಾರ್ಥಿ ಬಂಧನ

 ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ರೂಪಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೋರ್ವನನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

published on : 2nd April 2020

ಕೂಡಲೇ ಮಧ್ಯಪ್ರವೇಶ ಮಾಡಿ, ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಆದೇಶ

ಕೊರೋನಾ ವೈರಸ್ ಪ್ರಸರಣ ಭೀತಿ ಹಿನ್ನಲೆಯಲ್ಲಿ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ರಸ್ತೆಗಳನ್ನು ದಿಗ್ಬಂಧನದಿಂದ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

published on : 2nd April 2020

ಬಂಡಿಪುರ ಮೀಸಲು ಅರಣ್ಯದಲ್ಲಿ  ನಾಲ್ವರು ಕಳ್ಳ ಬೇಟೆಗಾರರ ಬಂಧನ 

ಬಂಡೀಪುರ ಮೀಸಲು ಅರಣ್ಯದಲ್ಲಿ ನಾಲ್ವರು ಕಳ್ಳ ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಬಳಿಯಿದ್ದ ಆಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.

published on : 30th March 2020

ಬೆಂಗಳೂರು: ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ಇಬ್ಬರ ಬಂಧನ

 ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಬೀದಿ ಬೀದಿಗಳಲ್ಲಿ ಸುತ್ತುತ್ತಾ ಸ್ಥಳೀರಲ್ಲಿ ಆತಂಕ ಮೂಡಿಸಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

published on : 28th March 2020

'ಹೊರಗಡೆ ಬಂದು ಸೀನಿ, ಕೊರೋನಾ ವೈರಸ್ ಹರಡಿ’ 

ಬೆಂಗಳೂರು: ‘ಹೊರಗಡೆ ಬಂದು ಸೀನಿ, ವೈರಸ್ ಹರಡಿ’ ಎಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್ ಮುಜೀಬ್ ಮೊಹಮ್ಮದ್ (34) ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ‘ಮಹದೇವಪುರ ಸಮೀಪದ ಎ. ನಾರಾಯಣಪುರದ ಮುಜೀಬ್, ಇನ್ಫೊಸಿಸ್ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.

published on : 28th March 2020

ಬೆಂಗಳೂರು ನಗರದಲ್ಲಿ ಸಂಚಾರ ಪಾಸ್‌ ವಿತರಣೆ: ಯಾರಿಗೆಲ್ಲಾ ಪಾಸ್ ಲಭ್ಯ ಗೊತ್ತಾ?

ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಈ ಅವಧಿಯಲ್ಲಿ ಅತ್ಯಗತ್ಯ ಸೇವೆಗಳಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸಂಚಾರ ಪಾಸ್ ನೀಡಲು ಕರ್ನಾಟಕ ಪೊಲೀಸ್ ಇಲಾಖೆ ನಿರ್ಧರಿಸಿದೆ.

published on : 25th March 2020

ಪ್ರಧಾನಿ ಸೂಚನೆ ಪಾಲಿಸಿ: ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಮನವಿ

ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.

published on : 25th March 2020

ಕ್ವಾರಂಟೈನ್ ನಲ್ಲಿದ್ದರೂ ಬೀದಿ ಸುತ್ತಲು ಬಂದವನಿಗೆ ಗ್ರಹಚಾರ ಬಿಡಿಸಿದ ಬೆಂಗಳೂರು ಪೊಲೀಸರು, ಕೇಸ್ ದಾಖಲು!

ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.

published on : 25th March 2020

ಜಮ್ಮು-ಕಾಶ್ಮೀರ: 7 ತಿಂಗಳ ಗೃಹ ಬಂಧನದ ಬಳಿಕ ಒಮರ್ ಅಬ್ದುಲ್ಲಾ ಬಿಡುಗಡೆ

ಸಂವಿಧಾನದ 370ನೇ ವಿಧಿ ರದ್ಧತಿ ಬಳಿಕ ಗೃಹ ಬಂಧನಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 7 ತಿಂಗಳ ಬಳಿಕ ಮಂಗಳವಾರ ಬಿಡುಗಡೆಗೊಂಡಿದ್ದಾರೆ. 

published on : 24th March 2020
1 2 3 4 5 6 >