ನೂರು ರೂಪಾಯಿ ಬೆಲೆಯ ಗೋಧಿ ಕಳ್ಳತನ; ಬರೋಬ್ಬರೀ 45 ವರ್ಷಗಳ ಬಳಿಕ ವ್ಯಕ್ತಿ ಬಂಧನ!

ನೈಋತ್ಯ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಕೃಷಿ ಹೊಲದಿಂದ ಸಲೀಂ ಶೇಖ್ರು ಇತರ ಐದು ಯುವಕರು 100 ರೂ. ಮೌಲ್ಯದ ಗೋಧಿಯನ್ನು ಕದ್ದಿದ್ದರು ಎಂದು ಖಾರ್ಗೋನ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಭೂಪಾಲ್ : ಸ್ನೇಹಿತರೊಂದಿಗೆ ಸೇರಿ ನೂರು ರೂಪಾಯಿ ಮೌಲ್ಯದ ಗೋಧಿಯನ್ನು ಹೊಲದಿಂದ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು 45 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ತಪ್ಪು ಮಾಡಿದ ಮೇಲೆ ಕಾನೂನು ನಿಯಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬದು ಇದರಿಂದ ಸಾಬೀತಾಗಿದೆ.

ನೈಋತ್ಯ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಕೃಷಿ ಹೊಲದಿಂದ ಸಲೀಂ ಶೇಖ್ರು ಇತರ ಐದು ಯುವಕರು 100 ರೂ. ಮೌಲ್ಯದ ಗೋಧಿಯನ್ನು ಕದ್ದಿದ್ದರು ಎಂದು ಖಾರ್ಗೋನ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1980 ರಲ್ಲಿ ಬಾಲಸಮುದ್ ಕಾಕಡ್ ಗ್ರಾಮದಲ್ಲಿ ಕಳ್ಳತನ ಮಾಡಿದಾಗ ಶೇಖ್ 20 ವರ್ಷ ವಯಸ್ಸಿನವನಾಗಿದ್ದನು. ಈಗ ಶೇಖ್ ಗೆ 65 ವರ್ಷವಾಗಿದೆ. ಪೊಲೀಸರು ತನ್ನನ್ನು ಹಿಡಿಯುವುದಿಲ್ಲ ಎಂದು ಭಾವಿಸಿ ತನ್ನ ಕೂದಲನ್ನು ಕತ್ತರಿಸಿದ್ದ, ಆದರೆ ಪಕ್ಕದ ಧಾರ್ ಜಿಲ್ಲೆಯ ಬಾಗ್ ಪ್ರದೇಶದ ಖಾರ್ಗೋನ್ ಜಿಲ್ಲಾ ಪೊಲೀಸರು ಬಂಧಿಸಿದಾಗ ಆತ ಆಘಾತಕ್ಕೊಳಗಾದ ಎಂದು ಹೇಳಿದ್ದಾರೆ.

ಬಂಧಿಸಿದ ನಂತರ ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಕೋರ್ಟ್ ಆತನಿಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಶೇಖ್ ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಸಲೀಂ ಮೊಹಮ್ಮದ್ ವರ್ಷಗಳ ಕಾಲ ತಲೆಮರೆಸಿಕೊಂಡರು ಮತ್ತು ನಂತರ ನ್ಯಾಯಾಲಯವು ಅವರನ್ನು ತಲೆಮರೆಸಿಕೊಂಡವರೆಂದು ಘೋಷಿಸಿತು ಮತ್ತು ಬಂಧನ ವಾರಂಟ್ ಹೊರಡಿಸಲಾಯಿತು.

Representational image
ಶಬರಿಮಲೆ ಚಿನ್ನ ಕಳವು ಪ್ರಕರಣ: TDB ಮಾಜಿ ಸದಸ್ಯ ಶಂಕರ್ ದಾಸ್ ಬಂಧನ!

ಮೊಹಮ್ಮದ್ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಬಾಲಕ್ವಾಡ ಪೊಲೀಸ್ ಠಾಣೆ ಪ್ರದೇಶದ ಪೊಲೀಸರು ಶೇಖ್ ಬಳಿ ತಲುಪಿಸಿದರು. ದೇವಾಸ್ ಜಿಲ್ಲೆಯಲ್ಲಿ ಮೊಹಮ್ಮದ್ ನನ್ನು ಪತ್ತೆ ಮಾಡುವುದಾಗಿ ಪೊಲೀಸರಿಗೆ ತಿಳಿಸಲಾಯಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ದಾಳಿ ನಡೆಸಿದಾಗ, ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.

ಆದರೆ ಶೇಖ್ ಇನ್ನೂ ಜೀವಂತವಾಗಿದ್ದ. ಗೋಧಿ ಕಳ್ಳತನ ನಡೆದ ಖಾರ್ಗೋನ್ ಜಿಲ್ಲೆಯ ಕೃಷಿ ಭೂಮಿಯಿಂದ ಸುಮಾರು 90-100 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ಬಾಗ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಮೊಹಮ್ಮದ್ ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕಾರ್ಯಾಚರಣೆಗೆ ಇಳಿದು ಧಾರ್ ನಿಂದ ಶೇಖ್ ನನ್ನು ಬಂಧಿಸಿದರು. ಪೊಲೀಸರು 1980 ರ ಪ್ರಕರಣವನ್ನು ಮರೆತಿದ್ದಾರೆ ಎಂದು ಆತ ನಂಬಿದ್ದ, ದಶಕಗಳು ಕಳೆದ ಮೇಲೂ ಪೊಲೀಸರು ತನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದು ಆತನಿಗೆ ತಿಳಿದಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com