ಇಂದು ರಾತ್ರಿ 8 ಗಂಟೆಯವರೆಗೂ ಬ್ಯಾಂಕ್ ಗಳು ಕಾರ್ಯನಿರ್ವಹಣೆ: ಆರ್ ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಬರುವ ಎಲ್ಲ ಸರ್ಕಾರಿ ಬ್ಯಾಂಕ್ ಗಳೂ ಶನಿವಾರ ರಾತ್ರಿ 8ರವರೆಗೂ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಬರುವ ಎಲ್ಲ ಸರ್ಕಾರಿ ಬ್ಯಾಂಕ್ ಗಳೂ ಶನಿವಾರ ರಾತ್ರಿ 8ರವರೆಗೂ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿರುವ ಆರ್ ಬಿಐ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದ್ದು, ಇಂದು ರಾತ್ರಿ 8ರವರೆಗೂ ಬ್ಯಾಂಕ್ ಗಳು ಕಾರ್ಯ ನಿರ್ವಹಣೆ ಮಾಡಲಿದ್ದು, ಮಧ್ಯರಾತ್ರಿ 12ರವರೆಗೂ ಇ-ಪೇಮೆಂಟ್ ಅಥವಾ ವಿದ್ಯುನ್ಮಾನ ಹಣದ ವಹಿವಾಟಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. 
ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ ಆರ್ ಟಿಜಿಎಸ್ ಮತ್ತು ನೆಫ್ಟ್ ಮಾದರಿ ಪಾವತಿ ವ್ಯವಸ್ಥೆಯ ಕಾರ್ಯ ನಿರ್ವಹಣಾ ಅವಧಿಯನ್ನು ಹೆಚ್ಟಿಸಲಾಗಿದ್ದು. ಮಧ್ಯರಾತ್ರಿ 12ರವೆರಗೂ ಕಾರ್ಯ ನಿರ್ವಹಣೆ ಮಾಡಲಿವೆ. ಇದಕ್ಕಗಾಗಿ ಈಗಾಗಲೇ ಎಲ್ಲ ರೀತಿಯ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದ್ದು, ದೇಶಾದ್ಯಂತ ವಿಶೇಷ ಕಾರ್ಯಾಚರಣೆ ಕೂಡ ಆರಂಭಿಸಲಾಗಿದೆ.  
ಅಲ್ಲದೆ ಸೋಮವಾರ ಅಂದರೆ ಏಪ್ರಿಲ್ 2ರಂದು ಖಾತೆಯ ನಿರ್ವಹಣಾ ದಿನವಾಗಿದ್ದು, ಅಂದೂ ಕೂಡ ಆರ್ ಬಿಐ ಕಚೇರಿಗಳು ಕಾರ್ಯ ನಿರ್ವಹಣೆ ಮಾಡಲಿವೆ. ಆದರೆ ವಿದ್ಯುನ್ಮಾನ ಪಾವತಿ ವ್ಯವಸ್ಥೆಗಳಾದ ಆರ್ ಟಿಜಿಎಸ್ ಮತ್ತು ನೆಫ್ಟ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com