ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ನಿಯಂತ್ರಣ ತೆಗೆದ ಬಳಿಕ ನಿಯಮಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗ ತೊಡಗಿದ್ದು, ಇಂದು ಮತ್ತೆ ಪೆಟ್ರೋಲ್ ದರದಲ್ಲಿ 33 ಪೈಸೆ ಏರಿಕೆಯಾಗಿದೆ. ಆ ಮೂಲಕ ರಾಜಧಾನಿ ದೆಹಲಿಯಲ್ಲೇ ಪ್ರತೀ ಲೀಟರ್ ಪೆಟ್ರೋಲ್ ದರ 76.24ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲೂ 26 ಪೈಸೆಯಷ್ಟು ಏರಿಕೆಯಾಗಿ ಡೀಸೆಲ್ ದರ 67.57ಕ್ಕೆ ಏರಿಕೆಯಾಗಿದೆ.