ತೈಲ ಬೆಲೆ ದಾಖಲೆಯ ಏರಿಕೆ: ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರದ ಚಿಂತನೆ

ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ತೈಲ ಬೆಲೆ ದಾಖಲೆಯ ಏರಿಕೆ: ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರದ ಚಿಂತನೆ
ತೈಲ ಬೆಲೆ ದಾಖಲೆಯ ಏರಿಕೆ: ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರದ ಚಿಂತನೆ
ನವದೆಹಲಿ: ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಬಕಾರಿ ಸುಂಕ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. 
ತೈಲ ಬೆಲೆ ಏರಿಕೆಯ ವಿಷೈಯದಲ್ಲಿ ಕೇಂದ್ರ ಸರ್ಕಾರ ಸೂಕ್ಷ್ಮವಾಗಿದೆ. ಪರ್ಯಾಯ ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ. ಶೀಘ್ರವೇ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 
ತೈಲೋತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಒಪಿಇಸಿಯ ಏಕಪಕ್ಷೀಯ ನಿರ್ಧಾರವನ್ನು ಧರ್ಮೇಂದ್ರ ಪ್ರಧಾನ್ ದೂಷಿಸಿದ್ದು, ತೈಲ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಪೆಟ್ರೋಲಿಯಂ ರಫ್ತು ಮಾಡುತ್ತಿರುವ ರಾಷ್ಟ್ರಗಳ ನಿರ್ಧಾರವೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲು ಕಾರಣ ಎಂದು ಹೇಳಿದ್ದಾರೆ. 
ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.24 ರೂ (33 ಪೈಸೆ ಏರಿಕೆ) ಯಾಗಿರುವ ಬೆನ್ನಲ್ಲೆ ಧರ್ಮೇಂದ್ರ ಪ್ರಧಾನ್ ಈ ಹೇಳಿಕೆ ನೀಡಿದ್ದು ಅಬಕಾರಿ ಸುಂಕ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com