ಪಿಎನ್ಬಿ ವಂಚನೆ: ನೀರವ್ ಮೋದಿಯ 170 ಕೋಟಿ ಮೌಲ್ಯದ ಆಸ್ತಿ ಕಪ್ಪು ಪಟ್ಟಿಗೆ ಸೇರಿಸಿದ ಇಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯ 170 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ....
ನೀರವ್ ಮೋದಿ
ನೀರವ್ ಮೋದಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯ 170 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕಪ್ಪು ಪಟ್ಟಿಗೆ ಸೇರಿಸಿಕೊಂಡಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿಗೆ ಸೇರಿದ  ಹಲವಾರು ಬ್ಯಾಂಕ್ ಖಾತೆಗಳು, ಸ್ಥಿರಾಸ್ತಿಗಳು, ಷೇರು ಹೂಡಿಕೆಗಳನ್ನು ಲಗತ್ತಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ನೀರವ್ ಮೋದಿ ಹಾಗೂ ಅವರ ಸಹವರ್ತಿಗಳು ಮತ್ತು ವ್ಯಾಪಾರ-ಸಂಬಂಧಿತ ಸಂಸ್ಥೆಗಳ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ, ಗೀತಾಂಜಲಿ ಗ್ರೂಪ್ಸ್ ನ 85 ಕೋಟಿ ರೂ. ಮೌಲ್ಯದ 34,000 ಆಭರಣಗಳನ್ನು ಸಂಸ್ಥೆ ವಶಕ್ಕೆ ಪಡೆದಿತ್ತು. ಗೀತಾಂಜಲಿ ಗ್ರೂಪ್ಸ್ ಸಹ ನೀರವ್ ಮೋದಿ ಅವರ ಸಂಬಂಧಿ  ಮೆಹುಲ್ ಚೋಕ್ಷಿ ಅವರಿಗೆ ಸೇರಿದೆ.
ನೀರವ್ ಮೋದಿ ಹಾಗೂ ಚೋಕ್ಷಿ ದೇಶದ ಪ್ರಮುಖ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂ ವಂಚನೆ ನಡೆಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ((ಇಡಿ) ತನಿಖೆ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com