• Tag results for ಇಡಿ

ಸಿಎಎ ವಿರೋಧಿ ಪ್ರತಿಭಟನೆ - ಪಿಎಫ್ಐ ನಡುವೆ ಆರ್ಥಿಕ ನಂಟು ಪತ್ತೆ ಹಚ್ಚಿದ ಇಡಿ

ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಡುವೆ ಹಣಕಾಸಿನ ನಂಟು ಇರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ.

published on : 27th January 2020

ಎಲ್ಇಡಿ ಟಿವಿ ಖರೀದಿಸಬೇಕೆ? ಸೂಕ್ತ ಮಾರ್ಗದರ್ಶಿ ಇಲ್ಲಿದೆ!

ಎಲ್ಇಡಿ ಟಿವಿ ಖರೀದಿಸುವಾಗ ಬಜೆಟ್ ಹೊರತುಪಡಿಸಿ, ಇನ್ನೂ ಕೆಲವು ಪ್ರಮುಖ ವಿಷಯಗಳನ್ನು ಪರಿಗಣಿಸಬೇಕು. ಇವು ಸ್ಕ್ರೀನ್ ಗಾತ್ರ, ಸ್ಕ್ರೀನ್ ವಿಧ, ಸ್ಕ್ರೀನ್ ರೆಸಲ್ಯೂಶನ್, ರಿಫ್ರೆಶ್ ಪ್ರಮಾಣ ಮತ್ತು ಧ್ವನಿ ಗುಣಮಟ್ಟ.

published on : 16th January 2020

ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ, ಅಗತ್ಯ ದಾಖಲೆ ಸಲ್ಲಿಸಿದ್ದೇನೆ: ಇಡಿ ವಿಚಾರಣೆ ಬಳಿಕ  ಕೆ.ಜೆ.ಜಾರ್ಜ್

ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಆರೋಪದಡಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿ, ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದಿದ್ದಾರೆ.

published on : 16th January 2020

ಅಕ್ರಮ ಆಸ್ತಿ: ಮಾಜಿ ಸಚಿವ ಕೆ.ಜೆ.ಜಾರ್ಜ್‌ಗೆ ಇಡಿ ಸಮನ್ಸ್

ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಹಾಗೂ ಕುಟುಂಬದ ಸದಸ್ಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

published on : 14th January 2020

ವಿಡಿಯೋಕಾನ್ ಸಾಲ ಹಗರಣ: ಚಂದಾ ಕೊಚ್ಚಾರ್‌ಗೆ ಸೇರಿದ 78 ಕೋಟಿ ಮೌಲ್ಯದ ಆಸ್ತಿ ವಶ!

ವಿಡಿಯೋಕಾನ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮಾಜಿ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಅವರಿಗೆ ಸೇರಿದ 78 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

published on : 10th January 2020

ಹೊಸ ವರ್ಷದಂದೇ ಮಲ್ಯಗೆ ಆಘಾತ! ವಶಕ್ಕೆ ಪಡೆದ ಆಸ್ತಿಗಳನ್ನು ಹರಾಜು ಹಾಕಲು ಬ್ಯಾಂಕುಗಳಿಗೆ ಕೋರ್ಟ್ ಅನುಮತಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಿಗೆ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ  ವಿಜಯ್ ಮಲ್ಯ ಅವರ ವಶಕ್ಕೆ ಪಡೆಯಲಾಗಿರುವ ಆಸ್ತಿಗಳನ್ನು ಹರಾಜು ಹಾಕಲು  ಅವಕಾಶ ನೀಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ಬುಧವಾರ ತಿಳಿಸಿವೆ

published on : 1st January 2020

ಕನಕಪುರದ ನಿವಾಸದಲ್ಲೇ ಡಿಕೆಶಿ ತಾಯಿ ಗೌರಮ್ಮ ವಿಚಾರಣೆಗೆ ಹೈಕೋರ್ಟ್ ಆದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಅವರ ಕನಕಪುರದ ನಿವಾಸದಲ್ಲೇ...

published on : 18th December 2019

ಸುಪ್ರೀಂಕೋರ್ಟ್ ನಲ್ಲಿ ಚಿದಂಬರಂ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಇಡಿ

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರಿಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್ ಗೆ ಇಡಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

published on : 28th November 2019

ಇಡಿ ತನಿಖೆ ಎದುರಿಸುತ್ತಿರುವ ಸಂಸ್ಥೆಯಿಂದ ಬಿಜೆಪಿ ದೇಣಿಗೆ ಸ್ವೀಕರಿಸುತ್ತಿದೆ: ಕಾಂಗ್ರೆಸ್ 

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತನಿಂದ ಆಸ್ತಿ ಖರೀದಿಸಿದ ಆರೋಪ ಎದುರಿಸುತ್ತಿರುವ ಕಂಪನಿಯಿಂದ ಬಿಜೆಪಿ ಕೋಟ್ಯಾಂತರ ರೂಪಾಯಿ ದೇಣಿಗೆ ಸ್ವೀಕರಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

published on : 22nd November 2019

ಛತ್ತೀಸ್ಗಢ: ಐಇಡಿ ಸ್ಫೋಟ, ಸಿಆರ್"ಪಿಎಫ್ ಯೋಧನಿಗೆ ಗಾಯ

ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ತರ್ರೆಮ್ ಗ್ರಾಮದಲ್ಲಿ ಐಇಡಿ ಸ್ಫೋಟಗೊಂಡಿದ್ದು, ಓರ್ವ ಸಿಆರ್'ಪಿಎಫ್ ಯೋಧನಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.   

published on : 22nd November 2019

ಐಎನ್ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಜಾಮೀನು ಅರ್ಜಿ ಸಂಬಂಧ ಇಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣ ಸಂಬಂಧ ಮಾಜಿ ವಿತ್ತ ಸಚಿವ ಚಿದಂಬರಂ ಜಾಮೀನು ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೇಳಿದೆ. 

published on : 20th November 2019

ಮಾಜಿ ಸಚಿವ ಡಿಕೆಶಿಗೆ 'ಸುಪ್ರೀಂ'ನಿಂದ ಬಿಗ್ ರಿಲೀಫ್: ಇಡಿ ಮೇಲ್ಮನವಿ ಅರ್ಜಿ ವಜಾ

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ.

published on : 15th November 2019

ಡಿಕೆಶಿ ಬಳಿಕ ಮತ್ತೊಬ್ಬ ಮಾಜಿ ಸಚಿವರಿಗೆ ಇಡಿ ಕುಣಿಕೆ: ಕೆಜೆ ಜಾರ್ಜ್ ವಿರುದ್ಧ 'ಫೆಮಾ' ಉಲ್ಲಂಘನೆ ಪ್ರಕರಣ?

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣ ದಾಖಲಿಸಲು  ಬೆಂಗಳೂರು ವಲಯ ಘಟಕ ಜಾರಿ ನಿರ್ದೇಶನಾಲಯ (ಇಡಿ) ಚಿಂತನೆ ನಡೆಸಿದೆ.

published on : 14th November 2019

ನಾನು ತಪ್ಪು ಮಾಡಿದ್ರೆ ಬಿಜೆಪಿ ಸ್ನೇಹಿತರು ಯಾವ ಶಿಕ್ಷೆ ಕೊಟ್ರೂ ಅನುಭವಿಸುವೆ: ಡಿ.ಕೆ.ಶಿವಕುಮಾರ್

ನಾನೇನಾದರೂ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ಬಿಜೆಪಿ ಸ್ನೇಹಿತರು ನನಗೆ ನೀಡಲಿ.ಶಿಕ್ಷೆ ಅನುಭವಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

published on : 1st November 2019

ಡಿಕೆಶಿ ತಾಯಿ, ಪತ್ನಿ ವಿಚಾರಣೆ ಬೆಂಗಳೂರಿನಲ್ಲಿ ನಡೆಸುವಂತೆ ಕೋರಿದ ಅರ್ಜಿ ನವೆಂಬರ್ 4ಕ್ಕೆ ಮುಂದೂಡಿಕೆ

ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಯ ಅರ್ಜಿ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನವೆಂಬರ್ 4ಕ್ಕೆ ಮುಂದೂಡಿದೆ.

published on : 30th October 2019
1 2 3 4 5 6 >