ಸೆನ್ಸೆಕ್ಸ್‌ 550 ಅಂಕ ಕುಸಿತ, ಅಧೋಗತಿಯತ್ತ ರುಪಾಯಿ, ತೈಲ ಬೆಲೆ ಗಗನಕ್ಕೆ

ಅಮೆರಿಕದ ಡಾಲರ್‌ ಎದುರು ಭಾರತದ ರುಪಾಯಿ ಮೌಲ್ಯ ಬುಧವಾರ ಹೊಸ ಸಾರ್ವಕಾಲಿಕ ಕುಸಿತ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಅಮೆರಿಕದ ಡಾಲರ್‌ ಎದುರು ಭಾರತದ ರುಪಾಯಿ ಮೌಲ್ಯ ಬುಧವಾರ ಹೊಸ ಸಾರ್ವಕಾಲಿಕ ಕುಸಿತ ಹಾಗೂ ಕಚ್ಚಾ ತೈಲ ಬೆಲೆ ನಿರಂತರ ಏರಿಕೆಯ ಪರಿಣಾಮ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 550 ಅಂಕಗಳ ಭಾರೀ ನಷ್ಟ ಅನುಭವಿಸಿದೆ.
ಬಿಎಸ್ ಇ 550 ಅಂಕಗಳ ನಷ್ಟ ಅನುಭವಿಸುವ ಮೂಲಕ ದಿನದ ವಹಿವಾಟನ್ನು 36 ಸಾವಿರ ಅಂಕಗಳ ಮಟ್ಟದಲ್ಲಿ ಅತ್ಯಂತ ನಿರಾಶಾದಾಯಕವಾಗಿ ಕೊನೆಗೊಂಡಿದೆ.
ಇನ್ನು ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಸಹ 150 ಅಂಕಗಳ ಕುಸಿಯುವ ಮೂಲಕ ದಿನದ ವಹಿವಾಟನ್ನು 10,858.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 
ಮುಂಬೈ ಷೇರು ಮಾರುಕಟ್ಟೆಯಲ್ಲಿ ಒಟ್ಟು 2,818 ಕಂಪೆನಿಗಳ ಷೇರುಗಳು ಇಂದು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,450 ಷೇರುಗಳು ಮುನ್ನಡೆ ಸಾಧಿಸಿದರೆ, 1,215 ಷೇರುಗಳು ಹಿನ್ನಡೆ ಅನುಭವಿಸಿದವು. 153 ಷೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಡಾಲರ್ ಎದುರು ಅಧೋಗತಿಯತ್ತ ಸಾಗುತ್ತಿರುವ ರುಪಾಯಿ ಮೌಲ್ಯ 72.91 ರುಪಾಯಿಗೆ ಕುಸಿದಿದ್ದು. ಕಚ್ಚಾ ತೈಲ ಬೆಲೆ ಬ್ಯಾರಲ್‌ ಗೆ 85.04 ಡಾಲರ್‌ ಗೆ ತಲುಪಿದೆ. ಈ ಎರಡು ವಿದ್ಯಮಾನಗಳು ಇಂದು ಷೇರು ಮಾರುಕಟ್ಟೆಯನ್ನು ತೀವ್ರವಾಗಿ ಅಸ್ಥಿರಗೊಳಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com